ADVERTISEMENT

ರಿಲಯನ್ಸ್ ಜುವೆಲ್ಸ್ ಮಳಿಗೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ಬೆಂಗಳೂರು:  ರಿಲಯನ್ಸ್ ರೀಟೇಲ್‌ನ ಆಭರಣಗಳ ವಿಶೇಷ ಮಳಿಗೆಯಾಗಿರುವ ರಿಲಯನ್ಸ್ ಜುವೆಲ್ ತನ್ನ ಅತಿದೊಡ್ಡ  ಮಳಿಗೆಯನ್ನು ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ   (ಕಬ್ಬನ್ ಪಾರ್ಕ್ ಎದುರು) ಆರಂಭಿಸಿದೆ.

ಅತ್ಯಾಧುನಿಕ ಮತ್ತು ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಈ ಮಳಿಗೆ ರಿಲಯನ್ಸ್ ಜುವೆಲ್ಸ್‌ನ ಅತಿದೊಡ್ಡ ಮಳಿಗೆಗಳಲ್ಲಿ ಒಂದಾಗಿದೆ. 25,000ಕ್ಕೂ ಹೆಚ್ಚು ವೈವಿಧ್ಯಮಯ ವಿನ್ಯಾಸಗಳ ಆಭರಣಗಳ ಸಂಗ್ರಹ ಈ ಮಳಿಗೆಯಲ್ಲಿ ಇದೆ.

ಆರಂಭಿಕ ಕೊಡುಗೆಯಾಗಿ 9 ದಿನಗಳ ಅತಿ ಅಗ್ಗದ ತಯಾರಿಕಾ ವೆಚ್ಚದ ಕೊಡುಗೆ ಘೋಷಿಸಲಾಗಿದೆ  ಎಂದು  ರಿಲಯನ್ಸ್ ಜುವೆಲ್ಸ್‌ನ ಹಿರಿಯ ಉಪಾಧ್ಯಕ್ಷ  ಅಶೋಕ್ ಕೌಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.