ADVERTISEMENT

ರೂಪಾಯಿ ಮೌಲ್ಯ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ಮುಂಬೈ (ಪಿಟಿಐ): ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯವು ಮಂಗಳವಾರದ ವಹಿವಾಟಿನಲ್ಲಿ 20 ಪೈಸೆಗಳಷ್ಟು ಚೇತರಿಸಿಕೊಂಡಿದ್ದು ರೂ. 55.11ರಷ್ಟಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಡಾಲರ್ ಲಭ್ಯತೆ ಹೆಚ್ಚಿರುವುದರಿಂದ ರೂಪಾಯಿ ಕಳೆದ 3 ದಿನಗಳಿಂದ ಚೇತರಿಕೆ ಹಾದಿಯಲ್ಲಿದೆ. 

ರೂಪಾಯಿ ಚೇತರಿಕೆಯಿಂದ ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಖರೀದಿ ಭರಾಟೆ ಹೆಚ್ಚಿದ್ದು, ಮಂಗಳವಾರ ರೂ. 475 ಕೋಟಿ ಮೌಲ್ಯದ ಷೇರು ಖರೀದಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.