ADVERTISEMENT

ರೆಪೊ ದರ ಏರಿಕೆ ಗ್ರಾಹಕರಿಗೆ ಹೊರೆ

ಪಿಟಿಐ
Published 6 ಜೂನ್ 2018, 19:30 IST
Last Updated 6 ಜೂನ್ 2018, 19:30 IST
ರೆಪೊ ದರ ಏರಿಕೆ ಗ್ರಾಹಕರಿಗೆ ಹೊರೆ
ರೆಪೊ ದರ ಏರಿಕೆ ಗ್ರಾಹಕರಿಗೆ ಹೊರೆ   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌, ನಾಲ್ಕು ವರ್ಷದಲ್ಲಿ ಇದೇ ಮೊದಲ ಬಾರಿಗೆ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದೆ.

ಇದರಿಂದ ಗೃಹ, ವಾಹನ ಖರೀದಿ ಮತ್ತು ಇತರ ಸಾಲಗಳ ತಿಂಗಳ ಸಮಾನ ಕಂತುಗಳು (ಇಎಂಐ) ಏರಿಕೆಯಾಗಲಿವೆ. ಬಡ್ಡಿ ದರ ಹೆಚ್ಚಳ ನಿರೀಕ್ಷಿಸಿದ್ದ ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ, ಮೊನ್ನೆಯಷ್ಟೇ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ 0.1ರವರೆಗೆ ಹೆಚ್ಚಿಸಿವೆ. ಇದರಿಂದ ವಿವಿಧ ಬಗೆಯ ಸಾಲಗಳು ದುಬಾರಿಯಾಗಿ ಪರಿಣಮಿಸಿವೆ.

ಬುಧವಾರ ಇಲ್ಲಿ ನಡೆದ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ, ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಗಳ ಮೇಲಿನ ಬಡ್ಡಿ ದರವನ್ನು (ರೆಪೊ) ಶೇ 0.25ರಷ್ಟು (ಶೇ 6.25) ಹೆಚ್ಚಿಸಲಾಗಿದೆ.  ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿಯನ್ನೂ (ರಿವರ್ಸ್‌ ರೆಪೊ) ಇದೇ ಪ್ರಮಾಣದಲ್ಲಿ (ಶೇ 6ಕ್ಕೆ) ಹೆಚ್ಚಿಸಲಾಗಿದೆ.

ADVERTISEMENT

2014ರ ಜನವರಿ 28ರ ನಂತರ ಇದೇ ಮೊದಲ ಬಾರಿಗೆ ಈ ನಿರ್ಧಾರಕ್ಕೆ ಬರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.