ADVERTISEMENT

ರೈಲ್ವೆ ನೌಕರರಿಗೆ 78 ದಿನಗಳ ಬೋನಸ್‌

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2014, 19:30 IST
Last Updated 27 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): 2013–14ನೇ ಸಾಲಿನಲ್ಲಿ ರೈಲ್ವೆ ಇಲಾಖೆ ನಷ್ಟದಲ್ಲಿ­ದ್ದರೂ ದೀಪಾವಳಿ ಹಬ್ಬಕ್ಕೆ ತನ್ನ ನೌಕರ­ರಿಗೆ 78 ದಿನಗಳ ಬೋನಸ್‌ ನೀಡಲಿದೆ.
ರೈಲ್ವೆ ಸಚಿವಾಲಯ ತನ್ನ  ನೌಕ­ರ­ರಿಗೆ ಉತ್ಪಾದನೆ ಆಧಾ­ರಿತ ಬೋನಸ್‌ (ಪಿಎಲ್‌ಬಿ) ನೀಡಲು ನಿರ್ಧರಿ­ಸಿದೆ. ಈ ಬಗ್ಗೆ ಆದೇಶ ಹೊರಡಿಸ­ಲಾ­ಗಿದೆ ಎಂದು ಹಿರಿಯ ಅಧಿಕಾರಿ­ಯೊಬ್ಬರು ಶನಿವಾರ ತಿಳಿಸಿದ್ದಾರೆ.

ಇದರಿಂದ ಪ್ರತಿ ನೌಕರರು ₨8,975 ಬೋನಸ್‌ ಪಡೆಯಲಿದ್ದು, 11.5 ಲಕ್ಷಕ್ಕೂ ಅಧಿಕ ಪತ್ರಾಂಕಿತ­ರಲ್ಲದ ನೌಕರ­ರಿಗೆ ಉಪ­ಯೋಗವಾಗಲಿದೆ. ಇದಕ್ಕಾಗಿ ಇಲಾಖೆ ₨800 ಕೋಟಿ ಭರಿಸ­ಬೇಕಾ­ಗುತ್ತದೆ. ಈ ಆದೇಶಕ್ಕೆ ಸಚಿವ ಸಂಪುಟ ಇನ್ನಷ್ಟೇ ಅನುಮೋದನೆ ನೀಡಬೇಕಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಮೆ­ರಿಕ ಪ್ರವಾಸದಲ್ಲಿರುವುದು, ಹಣ­ಕಾಸು ಸಚಿವ ಅರುಣ್‌ ಜೇಟ್ಲಿ ಅವರು ಆಸ್ಪತ್ರೆಗೆ ದಾಖಲಾಗಿರುವುದು ಹಾಗೂ ರೈಲ್ವೆ ಸಚಿವ ಸದಾ­ನಂದ ಗೌಡ ಅವರು ರಾಜಧಾನಿಯಿಂದ ಹೊರಗಿರು­­ವುದ­ರಿಂದ ಈ ಆದೇಶಕ್ಕೆ ನಂತರ  ಸಚಿವ ಸಂಪು­ಟದ ಅನು­ಮೋದನೆ ಪಡೆದು­ಕೊಳ್ಳ­­­ಲಾಗು­ವುದು ಎಂದು ಅಧಿಕಾರಿ­ಗಳು ತಿಳಿಸಿ­ದ್ದಾರೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ರೈಲ್ವೆ ಅಧಿಕ ಲಾಭ ಗಳಿಸಿದೆ. ನೌಕರರು ಹೆಚ್ಚು ಬೋನಸ್‌ ಪಡೆಯ­ಬೇಕಾಗಿತ್ತು. ಮೂರು ವರ್ಷ­ಗಳಿಂದ ಇಲಾಖೆ 78 ದಿನಗಳ ಬೋನಸ್‌ ಅಷ್ಟೇ ನೀಡುತ್ತಿದೆ’ ಎಂದು ಅಖಿಲ ಭಾರತ ರೈಲ್ವೆ ನೌಕರರ ಸಂಘದ ಕಾರ್ಯದರ್ಶಿ ಶಿವಗೋಪಾಲ್‌ ಮಿಶ್ರಾ ಆಕ್ಷೇಪಿಸಿದ್ದಾರೆ.

2011–12 ಹಾಗೂ 2012 –13ನೇ ಸಾಲಿನಲ್ಲೂ ರೈಲ್ವೆ ನೌಕರರಿಗೆ ಪಿಎಲ್‌ಬಿ ನೀಡಲಾಗಿತ್ತು. ಪ್ರತಿ ವರ್ಷ ದಸರಾ ಹಬ್ಬಕ್ಕಿಂತ ಮುಂಚಿತವಾಗಿ
ನೌಕರರಿಗೆ ಪಿಎಲ್‌ಬಿ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.