ADVERTISEMENT

ರೈಲ್ವೆ ವರಮಾನ ₹ 2,551 ಕೋಟಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 19:30 IST
Last Updated 3 ಏಪ್ರಿಲ್ 2018, 19:30 IST
ರೈಲ್ವೆ ವರಮಾನ ₹ 2,551 ಕೋಟಿ ಹೆಚ್ಚಳ
ರೈಲ್ವೆ ವರಮಾನ ₹ 2,551 ಕೋಟಿ ಹೆಚ್ಚಳ   

ನವದೆಹಲಿ: ವಿಮಾನಯಾನ ಸಂಸ್ಥೆಗಳ ದರ ಪೈಪೋಟಿಯ ನಡುವೆಯೂ ರೈಲ್ವೆ ಇಲಾಖೆ 2017–18ನೇ ಸಾಲಿನಲ್ಲಿ ಉತ್ತಮ ವರಮಾನ ಗಳಿಸಿದೆ.

ಟಿಕೆಟ್‌ ದರಗಳನ್ನು ಹೆಚ್ಚಿಸದೆಯೂ ರೈಲ್ವೆ ಇಲಾಖೆ ಉತ್ತಮ ಆದಾಯ ಗಳಿಸಿರುವುದು ಗಮನಾರ್ಹ.

ಪ್ರಯಾಣಿಕರ ಟಿಕೆಟ್‌ ಮಾರಾಟ ದಿಂದ ಇಲಾಖೆ ₹50,000 ಕೋಟಿ ಗಳಿಸಿದೆ. 2016–17ನೇ ಸಾಲಿಗೆ ಹೋಲಿಸಿದರೆ ವರಮಾನದಲ್ಲಿ ₹2,551 ಕೋಟಿಯಷ್ಟು ಹೆಚ್ಚಾಗಿದೆ.

ADVERTISEMENT

ರೈಲ್ವೆ ಪ್ರಯಾಣಿಕರ ಸಂಖ್ಯೆ ಮತ್ತು ಸರಕು ಸಾಗಾಣಿಕೆಯಲ್ಲೂ ಗಣನೀಯ ಹೆಚ್ಚಳ ಕಂಡು ಬಂದಿದೆ.

2016–17ರಲ್ಲಿ ಪ್ರಯಾಣಿಕರ ಸಂಖ್ಯೆ 822 ಕೋಟಿ ಇತ್ತು. ಇದು 2017–18ರಲ್ಲಿ 826 ಕೋಟಿಗೆ ಏರಿಕೆಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಬೃಹತ್‌ ಪ್ರಮಾಣದಲ್ಲಿ ಕಲ್ಲಿದ್ದಲು, ಗೊಬ್ಬರ ಮತ್ತು ಉಕ್ಕು ಸಾಗಾಣಿಕೆ ದರಗಳಲ್ಲಿ ರಿಯಾಯತಿ ನೀಡಲು ಇಲಾಖೆ ಚಿಂತನೆ ನಡೆಸಿದೆ.

ವಿಮಾನ ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ರಾಜಧಾನಿ, ಶತಾಬ್ದಿಯಂತಹ ರೈಲುಗಳ ಪ್ರಯಾಣ ದರಗಳಲ್ಲಿ ಕಡಿತ ಮಾಡಲಾಗಿತ್ತು. ಆದರೆ, ಅದರಿಂದ ಹೇಳಿಕೊಳ್ಳುವಂತಹ ಪ್ರಯೋಜನವಾಗಿಲ್ಲ ಎಂದು ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.