ADVERTISEMENT

ಶೀಘ್ರವೇ ಐರೋಪ್ಯ ಒಕ್ಕೂಟ, ಭಾರತ ವ್ಯಾಪಾರ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 19:00 IST
Last Updated 21 ಏಪ್ರಿಲ್ 2011, 19:00 IST

ನವದೆಹಲಿ (ಪಿಟಿಐ): ಐರೋಪ್ಯ ಒಕ್ಕೂಟ ಮತ್ತು ಭಾರತದ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ಈ ವರ್ಷಾಂತ್ಯದ ಹೊತ್ತಿಗೆ ಜಾರಿಗೆ ತರಲು ಉದ್ದೇಶಿಸಲಾಗಿದ್ದು, ಇದರಿಂದ ಎರಡೂ ಕಡೆಯ ಗ್ರಾಹಕರಿಗೆ ಪ್ರಯೋಜನವಾಗಲಿದೆ.

ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬರುವ ಮೂಲಕ ಸರಕು ಮತ್ತು ಸೇವೆಗಳ ಆಮದು ಅಗ್ಗವಾಗಲಿದೆ. ಸಮತೋಲನದ ಮತ್ತು ಮಹತ್ವಾಕಾಂಕ್ಷೆಯ ಒಪ್ಪಂದಕ್ಕೆ ಯೂರೋಪ್ ಒಕ್ಕೂಟ ಮತ್ತು ಭಾರತ ಬದ್ಧವಾಗಿವೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಆನಂದ್ ಶರ್ಮಾ ತಿಳಿಸಿದ್ದಾರೆ.

‘ಎಫ್‌ಟಿಎ’ ಜಾರಿಗೆ ತರುವ  ನಿಟ್ಟಿನಲ್ಲಿ ಈಗಾಗಲೇ 12 ಸುತ್ತಿನ ಮಾತುಕತೆಗಳು ಪೂರ್ಣಗೊಂಡಿವೆ. ಈ ಒಪ್ಪಂದದಡಿ ದ್ವಿಪಕ್ಷೀಯ ವಾಣಿಜ್ಯದ ಶೇ 90ರಷ್ಟು ಸರಕು ಮತ್ತು ಸೇವೆಗಳನ್ನು ತರಲು ಉದ್ದೇಶಿಸಲಾಗಿದೆ. ಜತೆಗೆ ಪರಸ್ಪರ ಹೂಡಿಕೆ ನಿಯಮಗಳನ್ನು ಸರಳಗೊಳಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.