ADVERTISEMENT

`ಶೇ5.5 ಮಿತಿಯಲ್ಲೇ ವಿತ್ತೀಯ ಕೊರತೆ'

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2013, 19:59 IST
Last Updated 12 ಫೆಬ್ರುವರಿ 2013, 19:59 IST
ಪ್ರಧಾನಿ ಮನಮೋಹನ್ ಸಿಂಗ್
ಪ್ರಧಾನಿ ಮನಮೋಹನ್ ಸಿಂಗ್   

ನವದೆಹಲಿ(ಪಿಟಿಐ): ವಿತ್ತೀಯ ಕೊರತೆಯನ್ನು ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ(ಜಿಡಿಪಿ)ಯ ಶೇ 5.3ರ ಮಿತಿಯಲ್ಲಿಯೇ ಉಳಿಸಿಕೊಳ್ಳಲು ಬದ್ಧಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಇಲ್ಲಿ ರಾಜ್ಯಪಾಲರ ಸಮಾವೇಶದಲ್ಲಿ ಮಂಗಳವಾರ ಮಾತನಾಡಿ, ಕಳೆದ ದಶಕದಲ್ಲಿ ಆರ್ಥಿಕ ಪ್ರಗತಿ ಸರಾಸರಿ ಶೇ 8ರಷ್ಟು ದಾಖಲಾಗಿದ್ದಿತು. ಕಳೆದೆರಡು ವರ್ಷಗಳಿಂದ ಪ್ರಗತಿ ಮಂದಗತಿಯಲ್ಲಿದೆ. ಪ್ರಸಕ್ತ ಹಣಕಾಸು ವರ್ಷ ನಿರೀಕ್ಷೆಗಿಂತ ಕೆಳಮಟ್ಟದಲ್ಲಿದೆ.

ಇಂಥ ಸ್ಥಿತಿಯಿಂದ ಹೊರಬಂದು ಚೇತರಿಕೆ ಕಾಣುವ ಸಲುವಾಗಿ ಸರ್ಕಾರ ಆರ್ಥಿಕ ಸುಧಾರಣೆಯ ಹಲವು ಕ್ರಮಗಳನ್ನು ಕೈಗೊಂಡಿದೆ. ಬೃಹತ್ ಯೋಜನೆಗಳಿಗೆ ತ್ವರಿತಗತಿ ಅನುಮತಿ ನೀಡುವುದು ಸಹ ಅಂತಹ ಕ್ರಮಗಳಲ್ಲೊಂದು ಎಂದರು.

ಮಂದಗತಿ ಪ್ರಗತಿಗೆ ದೇಶದೊಳಗಿನ ಮತ್ತು ಹೊರಗಿನ ವಿದ್ಯಮಾನಗಳೂ ಕಾರಣವಾಗಿವೆ. ಈ ಪರಿಸ್ಥಿತಿಯನ್ನು ಬದಲಿಸಿ ಬಂಡವಾಳ ಹೂಡಿಕೆಗೆ ಭರವಸೆಯ ವಾತಾವರಣ ಮೂಡಿಸಲು ಮತ್ತು ಪಗ್ರತಿಯ ಹಾದಿಗೆ ಮರಳಲು ಸರ್ಕಾರ ಎಲ್ಲ ರೀತಿಯ ಪ್ರಯತ್ನವನ್ನೂ ನಡೆಸುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.