ಬೆಂಗಳೂರು: ಬೋಧನೆ ಮತ್ತು ಕಲಿಕೆಗೆ ಮೈಕ್ರೊಸಾಫ್ಟ್‌ನ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಗರದ ಟೆಕ್ ಅವಂತ್ ಗಾರ್ಡ್ ಸಂಸ್ಥೆಯು ಶಿಕ್ಷಣ ಸಂಸ್ಥೆಗಳಿಗೆ ನೆರವಾಗುತ್ತಿದೆ.
‘ಎಂಎಎಸ್‌ಪಿ ಪ್ರೊ’ ಕಾರ್ಯಕ್ರಮದ ನೆರವಿನಿಂದ ತರಗತಿ ಒಳಗೆ ಮತ್ತು ಹೊರಗೆ ಶೈಕ್ಷಣಿಕ ಅನುಭವ ವಿಸ್ತರಿಸಲು ಸಾಧ್ಯವಾಗಲಿದೆ. ಶಾಲೆಯನ್ನು ಪರಸ್ಪರ ಸಂಪರ್ಕ ಹೊಂದಿದ ಕಲಿಕಾ ಸಮುದಾಯವನ್ನಾಗಿ ಪರಿವರ್ತಿಸಲು ಈ ತಂತ್ರಜ್ಞಾನ ನೆರವಿಗೆ ಬರಲಿದೆ. ಇಫೀ ಆನ್‌ಲೈನ್ ತಂತ್ರಜ್ಞಾನ ನೆರವಿನಿಂದ ಡಿಜಿಟಲ್ ಪಾವತಿ ಸೌಲಭ್ಯ ಅಳವಡಿಸಿಕೊಳ್ಳಲು ನೆರವಾಗಲಿದೆ ಎಂದು ಸಂಸ್ಥೆಯ ಸಿಇಒ ಅಲಿ ಸೇಟ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.