ADVERTISEMENT

ಷೇರುಪೇಟೆ: ಮೂರು ದಿನಗಳ ವಹಿವಾಟು

ಪಿಟಿಐ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಂಪೆನಿಗಳ ಎರಡನೇ ತ್ರೈಮಾಸಿಕ ಆರ್ಥಿಕ ಸಾಧನೆ ಈ ವಾರ ಷೇರು‍ಪೇಟೆ ಮೇಲೆ ಪ್ರಭಾವ ಬೀರಲಿದೆ ಎಂದು ಮಾರುಕಟ್ಟೆ ಪರಿಣತರು ಹೇಳಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ಗುರುವಾರ ಮತ್ತು ಶುಕ್ರವಾರ ವಹಿವಾಟಿಗೆ ರಜೆ ಇರಲಿದೆ. ಆದರೆ, ಗುರುವಾರ ಒಂದು (ಸಂಜೆ 6.30 ರಿಂದ 7.30) ಗಂಟೆಯ ಮುಹೂರ್ತದ ವಹಿವಾಟು ನಡೆಯಲಿದೆ.

ಮೂರು ದಿನಗಳ ವಹಿವಾಟಿನಲ್ಲಿ ಕಂಪೆನಿಗಳ ತ್ರೈಮಾಸಿಕ ಸಾಧನೆ ಹೆಚ್ಚು ಪ್ರಭಾವ ಬೀರಲಿವೆ. ವಿಪ್ರೊ ಮತ್ತು ಆ್ಯಕ್ಸಿಸ್ ಬ್ಯಾಂಕ್, ಬಜಾಜ್‌ ಆಟೊ, ಅಲ್ಟ್ರಾಟೆಕ್‌ ಸಿಮೆಂಟ್, ಎಸಿಸಿ ಕಂಪೆನಿಗಳು ತಮ್ಮ ಆರ್ಥಿಕ ಸಾಧನೆ ಪ್ರಕಟಿಸಲಿವೆ. ಸಗಟು ಹಣದುಬ್ಬರದ ಅಂಕಿ–ಅಂಶ ಸೋಮವಾರ ಹೊರಬೀಳಲಿದೆ. ಜಾಗತಿಕ ಮಟ್ಟದಲ್ಲಿ ಚೀನಾದ ಮೂರನೇ ತ್ರೈಮಾಸಿಕದ ಜಿಡಿಪಿ ಪ್ರಗತಿಯ ಅಂಕಿ–ಅಂಶವೂ ಹೊರಬೀಳಲಿದೆ.

ADVERTISEMENT

ಸತತ 2ನೇ ವಾರವೂ ಸಕಾರಾತ್ಮಕ ವಹಿವಾಟು ನಡೆಯಿತು. ಅ.13 ಕ್ಕೆ ಕೊನೆಗೊಂಡ ವಾರದಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಸೂಚ್ಯಂಕ 618 ಅಂಶ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ ) ನಿಪ್ಟಿ 187 ಅಂಶ ಏರಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.