ADVERTISEMENT

ಸಣ್ಣ ಕೈಗಾರಿಕೆಗಳ ನಿರ್ಲಕ್ಷ್ಯ: ಕಾಸಿಯಾ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ಬೆಂಗಳೂರು: ಪ್ರಸಕ್ತ ಸಾಲಿನ ಮುಂಗಡ ಪತ್ರವನ್ನು ಆರ್ಥಿಕ ಬೆಳವಣಿಗೆಯ ದೂರದೃಷ್ಟಿಯಿಂದ ನೋಡುವುದಾದರೆ  ಆಶಾದಾಯಕವಾಗಿದೆ ಎಂದರೂ, ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ (ಎಂಎಸ್‌ಎಂಇ) ಉತ್ತೇಜನಕ್ಕೆ ಯಾವುದೇ ಕೊಡುಗೆ ಇಲ್ಲದಿರುವುದು ದುರದೃಷ್ಟಕರ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)  ಪ್ರತಿಕ್ರಿಯಿಸಿದೆ. ರಾಜ್ಯದ ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು  ಪ್ರಸಕ್ತ ಸಾಲಿನ ಬಜೆಟ್‌ನಿಂದ ಹಲವು ಕೊಡುಗೆಗಳನ್ನು ನಿರೀಕ್ಷಿಸಿದ್ದವು. ಆದರೆ, ಸಣ್ಣ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಮೂಲಸೌಕರ್ಯ ವೃದ್ಧಿ, ಸಂಪನ್ಮೂಲ ಕ್ರೋಡೀಕರಣಕ್ಕೆ  ಆದ್ಯತೆ ನೀಡಲಾಗಿಲ್ಲ. ಬಜೆಟ್ ಪೂರ್ವದಲ್ಲಿ ‘ಕಾಸಿಯಾ’ ಸಲ್ಲಿಸಿದ್ದ ಬೇಡಿಕೆಗಳನ್ನು ಮಾನ್ಯ ಮಾಡಿಲ್ಲ ಎಂದು ಅಧ್ಯಕ್ಷ ಎಸ್.ಎಸ್ ಬಿರಾದರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.