ಮುಂಬೈ (ಪಿಟಿಐ): ಬ್ಯಾಂಕಿನಿಂದ ಸಾಲ ಪಡೆದ ಗ್ರಾಹಕರಿಗೆ, ಕಾಲ ಕಾಲಕ್ಕೆ ಸಾಲದ ಸಂಪೂರ್ಣ ಮಾಹಿತಿ ಒಳಗೊಂಡ ವರದಿಯನ್ನು (ಸಿಐಆರ್) ಉಚಿತವಾಗಿ ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕುಗಳಿಗೆ ಸೂಚನೆ ನೀಡಿದೆ.
ಸಾಲದ ಸಂಪೂರ್ಣ ಮಾಹಿತಿ ಒಳಗೊಂಡಿರುವ ಪ್ರತಿಯನ್ನು ಸಾಲಗಾರರಿಗೆ ಉಚಿತವಾಗಿ ನೀಡಬೇಕು. ಇದರಿಂದ ಸಾಲ ಮರುಪಾವತಿ ಜಾಗೃತಿ ಹೆಚ್ಚುತ್ತದೆ. ಬ್ಯಾಂಕುಗಳು ಮತ್ತು ಸಾಲಗಾರರ ನಡುವಿನ ಬಾಂಧವ್ಯ ಹೆಚ್ಚುತ್ತದೆ. ಇದರ ಜತೆಗೆ, ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಸಹಾಯಕವಾಗುತ್ತದೆ ಎಂದು ‘ಆರ್‌ಬಿಐ’ ಪ್ರಕಟಣೆ ತಿಳಿಸಿದೆ.
ಬ್ಯಾಂಕುಗಳ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಗಣನೀಯವಾಗಿ ಹೆಚ್ಚುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿರುವ ‘ಆರ್‌ಬಿಐ’, ಆರಂಭದಿಂದಲೇ ಸಾಲ ವಸೂಲಿಗೆ ಕ್ರಮ ಕೈಗೊಳ್ಳಬೇಕು. ಕಾರ್ಪೊರೇಟ್ ಸಾಲಗಾರರಿಗೆ ಸಹ ಇಂತಹ ವರದಿ ನೀಡಬೇಕು ಎಂದಿದೆ. ‘ಸಿಐಆರ್’ನ ಕರಡು ಪ್ರತಿಯನ್ನು ‘ಆರ್‌ಬಿಐ’ ವೆಬ್ ತಾಣದಲ್ಲಿ ಪ್ರಕಟಿಸಿದ್ದು, ಗ್ರಾಹಕರು ಮತ್ತು ಹಣಕಾಸು ಸಂಸ್ಥೆಗಳಿಂದ ಪ್ರತಿಕ್ರಿಯೆ ಆಹ್ವಾನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.