ADVERTISEMENT

`ಸಿಂಗೂರ್' ನಿರಾಶಾದಾಯಕ ಸಂಗತಿ: ಟಾಟಾ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ಮುಂಬೈ (ಪಿಟಿಐ): `ಸಿಂಗೂರ್' ಕಾರು ತಯಾರಿಕಾ ಘಟಕ ವಿಚಾರ ಅತ್ಯಂತ ನಿರಾಶಾದಾಯಕ ಸಂಗತಿಯಾಗಿದೆ ಎಂದು ಟಾಟಾ ಸಮೂಹದ ನಿರ್ಗಮಿತ ಅಧ್ಯಕ್ಷ ರತನ್ ಟಾಟಾ ಹೇಳಿದ್ದಾರೆ.

`ಹಾಗಿದ್ದೂ ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೂ ಕಾಯತ್ತೇವೆ. ಅಲ್ಲಿಯವರೆಗೂ ತಯಾರಿಕಾ ಘಟಕ ಪಶ್ಚಿಮ ಬಂಗಾಳದಲ್ಲೇ ಇರುತ್ತದೆ' ಎಂದಿರುವ ಅವರು, ಸದ್ಯಕ್ಕಂತೂ  ಗುಜರಾತ್‌ಗೆ ಘಟಕ ಸ್ಥಳಾಂತರ ಇಲ್ಲ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ.  

ಪೂರ್ವ ರಾಜ್ಯಗಳು ದೇಶದ ಉಳಿದ ಭಾಗಗಳಷ್ಟು ಆರ್ಥಿಕವಾಗಿ ಅಭಿವೃದ್ಧಿಆಗಿಲ್ಲ ಎನ್ನುವುದೇ ರತನ್ ಟಾಟಾ ಅವರಿಗೆ ಪಶ್ಚಿಮ ಬಂಗಾಳದ ಮೇಲಿನ ಪ್ರೀತಿಗೆ ಕಾರಣ.

`ಪೂರ್ವ ರಾಜ್ಯಗಳಲ್ಲಿ ಯಾವುದೇ ಹೂಡಿಕೆ ಯೋಜನೆ ಬಂದರೂ ನಾನು ಸ್ವಾಗತಿಸುತ್ತೇನೆ ಎಂದು ಸುದ್ದಿಸಂಸ್ಥೆಗೆ  ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕಾರು ತಯಾರಿಕೆ ಘಟಕವನ್ನು ಭಾರತದಲ್ಲಿ ಆರಂಭಿಸುವ ಆಲೋಚನೆ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.