ADVERTISEMENT

ಸಿಆರ್‌ಆರ್ ಕಡಿತ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST

ನವದೆಹಲಿ(ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ಅರ್ಧ ತ್ರೈಮಾಸಿಕ ಅವಧಿ ಹಣಕಾಸು ಪರಾಮರ್ಶೆಯನ್ನು ಮಂಗಳವಾರ ಪ್ರಕಟಿಸಲಿದೆ. ಹಣದುಬ್ಬರ ಇನ್ನೂ ಮೇಲ್ಮಟ್ಟದಲ್ಲಿಯೇ ಇರುವ ಹಿನ್ನೆಲೆಯಲ್ಲಿ ಬಡ್ಡಿದರದಲ್ಲಿ ಯಾವುದೇ ಕಡಿತ ನಿರೀಕ್ಷಿಸುವಂತಿಲ್ಲ ಎಂದು ಹಣಕಾಸು ತಜ್ಞರು ಹೇಳಿದ್ದಾರೆ.

ಬ್ಯಾಂಕ್‌ಗಳಲ್ಲಿನ ನಗದು ಮೀಸಲು ಅನುಪಾತ(ಸಿಆರ್‌ಆರ್)ದಲ್ಲಿ ಕೊಂಚ ಕಡಿತ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ಬ್ಯಾಂಕ್‌ಗಳು `ಆರ್‌ಬಿಐ'ನಿಂದ ಪಡೆಯುವ ಸಾಲ ್ಙ1,46,300 ಕೋಟಿಗೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT