ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಪ್ರಧಾನಿ ಮನಮೋಹನ್್ ಸಿಂಗ್‌್ ಅವರ ಸಲಹೆಗಾರ ಟಿ.ಕೆ.ಎ.ನಾಯರ್ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಿದೆ.
ಕಲ್ಲಿದ್ದಲು ಸಚಿವಾಲಯದ ಆಯ್ಕೆ ಸಮಿತಿ ಅಸಮ್ಮತಿಯ ನಡುವೆಯೂ ಹಿಂಡಾಲ್ಕೊ ಕಂಪೆನಿಗೆ ಒಡಿಶಾದ ತಲಬಿರಾದಲ್ಲಿ ನಿಕ್ಷೇಪ ಹಂಚಿಕೆ ಮಾಡಿದ್ದು ಸೇರಿದಂತೆ ನಿಕ್ಷೇಪ ಹಂಚಿಕೆಯಲ್ಲಿ ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ನಾಯರ್‌್ ಅವರಿಂದ ಸಿಬಿಐ ಮಾಹಿತಿ ಕೇಳಿತ್ತು.
ಸಿಬಿಐ ಕಳುಹಿಸಿದ ಸುದೀರ್ಘ ಪ್ರಶ್ನಾವಳಿಗಳಿಗೆ ನಾಯರ್‌್ ಉತ್ತರಿಸಿ ದ್ದಾರೆ ಎಂದು ಮೂಲಗಳು ತಿಳಿಸಿವೆ. 2006ರಿಂದ 2009ವರೆಗೆ ಪ್ರಧಾನಿ ಸಿಂಗ್‌್ ಅವರು ಕಲ್ಲಿದ್ದಲು ಖಾತೆ ವಹಿಸಿಕೊಂಡಿದ್ದಾಗ ನಿಕ್ಷೇಪ ಹಂಚಿಕೆಯಲ್ಲಿ ಅನುಸರಿಸಿದ್ದ ನೀತಿ, ನಿಕ್ಷೇಪ ಹರಾಜಿನಲ್ಲಿ ಆದ ವಿಳಂಬ, ನಾಪತ್ತೆಯಾದ ಕಡತಗಳು, ಹಿಂಡಾಲ್ಕೊಗೆ ತಲಬಿರಾದಲ್ಲಿ ನಿಕ್ಷೇಪ ಹಂಚಿಕೆ ಮಾಡಿದ ಕಾರಣ... ಇತ್ಯಾದಿ ಮಾಹಿತಿಯನ್ನು ಸಿಬಿಐ ನಾಯರ್‌್ ಅವರಿಂದ ಕೇಳಿತ್ತು.
ತಲಬಿರಾದಲ್ಲಿ ಹಿಂಡಾಲ್ಕೊ ಕಂಪೆ ನಿಗೆ ನಿಕ್ಷೇಪ ಹಂಚಿಕೆ ಮಾಡಿದ್ದಕ್ಕೆ ಸಂಬಂಧಿಸಿ ಅಂದಿನ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ.ಪಾರಖ್‌್ ಹಾಗೂ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ನಾಯರ್‌್ ಕಳುಹಿಸಿದ ಪ್ರತಿಕ್ರಿಯೆ ಬಗ್ಗೆ ಸುಪ್ರೀಂಕೋರ್ಟ್‌ಗೆ ಸಿಬಿಐ ಮಾಹಿತಿ ನೀಡಲಿದೆ. ಪ್ರಧಾನಿ ಕಚೇ ರಿಯ ಇಬ್ಬರು ಮಾಜಿ ಅಧಿಕಾರಿಗ ಳಾದ ವಿನಿ ಮಹಾಜನ್್ ಹಾಗೂ ಆಶಿಶ್ ಗುಪ್ತಾ ಅವರನ್ನು ಈಗಾಗಲೇ ಸಿಬಿಐ ಪ್ರಶ್ನೆಗೊಳಪಡಿಸಿದೆ.
2006ರಿಂದ 2009ರ ಅವಧಿಯಲ್ಲಿ ಇವರಿಬ್ಬರೂ ಪ್ರಧಾನಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮಾರ್ಚ್‌್ 26ರ ಒಳಗೆ ಸಿಬಿಐ ಈ ಹಗರಣದ ತನಿಖೆಯ ಅಂತಿಮ ವರದಿ ಸಲ್ಲಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.