ADVERTISEMENT

ಸೂಚ್ಯಂಕದ ಹೊಸ ಎತ್ತರ

ಮೊದಲ ಬಾರಿಗೆ 34 ಸಾವಿರದ ಗಡಿ ದಾಟಿದ ಬಿಎಸ್‌ಇ

ಪಿಟಿಐ
Published 26 ಡಿಸೆಂಬರ್ 2017, 19:37 IST
Last Updated 26 ಡಿಸೆಂಬರ್ 2017, 19:37 IST
ಮುಂಬೈ ಷೇರುಪೇಟೆ ಹೊರಭಾಗದಲ್ಲಿ ಮಂಗಳವಾರ ದಲ್ಲಾಳಿಗಳು ಮತ್ತು ಷೇರುಪೇಟೆ ಸಿಬ್ಬಂದಿ ಸಂಭ್ರಮಿಸಿದರು    – ಪಿಟಿಐ ಚಿತ್ರ
ಮುಂಬೈ ಷೇರುಪೇಟೆ ಹೊರಭಾಗದಲ್ಲಿ ಮಂಗಳವಾರ ದಲ್ಲಾಳಿಗಳು ಮತ್ತು ಷೇರುಪೇಟೆ ಸಿಬ್ಬಂದಿ ಸಂಭ್ರಮಿಸಿದರು – ಪಿಟಿಐ ಚಿತ್ರ   

ಮುಂಬೈ: ದೇಶಿ ಷೇರು ಮಾರುಕಟ್ಟೆಗಳಿಗೆ ಮಂಗಳವಾರ ಇನ್ನೊಂದು ದಾಖಲೆ ದಿನವಾಗಿತ್ತು. ಸಂವೇದಿ ಸೂಚ್ಯಂಕ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆಗಳು (ನಿಫ್ಟಿ) ಹೊಸ ಎತ್ತರ ತಲುಪಿದವು.

ವಹಿವಾಟಿನ ಅಂತ್ಯದಲ್ಲಿ ನಡೆದ ಷೇರುಗಳ ಖರೀದಿ ಭರಾಟೆಯಿಂದ ಈ ದಾಖಲೆ ಸಾಧ್ಯವಾಯಿತು. ದಿನದ ವಹಿವಾಟಿನಲ್ಲಿ ಸೂಚ್ಯಂಕವು 70.31 ಅಂಶಗಳ ಏರಿಕೆ ಕಂಡು 34,010.61 ಅಂಶಗಳಿಗೆ ತಲುಪಿತು. ಶುಕ್ರವಾರದ ವಹಿವಾಟಿನಲ್ಲಿ ಸೂಚ್ಯಂಕವು 33,940 ಅಂಶಗಳಿಗೆ ತಲುಪಿತ್ತು.

‘ನಿಫ್ಟಿ’ 38.50 ಅಂಶಗಳ ಏರಿಕೆ ಕಂಡು 10,531.50 ಅಂಶಗಳಿಗೆ ತಲುಪಿತು. ವಹಿವಾಟಿನ ಒಂದು ಹಂತದಲ್ಲಿ ಇದು 10,545.45 ಅಂಶಗಳಿಗೂ ಏರಿಕೆ ಕಂಡಿತ್ತು.

ADVERTISEMENT

ಸಣ್ಣ ಮತ್ತು ಮಧ್ಯಮ ಗಾತ್ರದ ಷೇರುಗಳ ಖರೀದಿಗೆ ಹೂಡಿಕೆದಾರರು ಹೆಚ್ಚು ಉತ್ಸುಕತೆ ತೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.