ADVERTISEMENT

ಸೂಚ್ಯಂಕ ಕುಸಿತ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಸೋಮವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 108 ಅಂಶಗಳಷ್ಟು ಕುಸಿತ ದಾಖಲಿಸಿದೆ.ಕಳೆದ ವಾರ ವಹಿವಾಟು ಮೂರೇ ದಿನ ನಡೆದರೂ,ಅಲ್ಪಾವಧಿಯಲ್ಲಿ ಸೂಚ್ಯಂಕ ಶೇ 6.1ರಷ್ಟು ಚುರುಕು ಏರಿಕೆ ಪ್ರದರ್ಶಿಸಿ, ಒಟ್ಟು 972 ಅಂಶಗಳಷ್ಟು ಏರಿಕೆ ಕಂಡಿತ್ತು. ಆದರೆ, ಜಾಗತಿಕ ಸಂಗತಿಗಳ ಹಿನ್ನೆಲೆಯಲ್ಲಿ  ಸೋಮವಾರ 108 ಅಂಶಗಳಷ್ಟು ಕುಸಿದು 16,713 ಅಂಶಗಳಿಗೆ ವಹಿವಾಟು ಕೊನೆಗೊಳಿಸಿದೆ.

ತೈಲ ಶುದ್ಧೀಕರಣ, ಮಾಹಿತಿ ತಂತ್ರಜ್ಞಾನ ಮತ್ತು ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಕಂಪೆನಿಗಳು ದಿನದ ವಹಿವಾಟಿನಲ್ಲಿ ನಷ್ಟಕ್ಕೊಳಗಾದವು. ಕಳೆದ ವಾರ ಸೂಚ್ಯಂಕ ಏರಿಕೆಯಲ್ಲಿದ್ದ ಹಿನ್ನೆಲೆಯಲ್ಲಿ ಸೋಮವಾರವೂ ಮಾರಾಟದ ಒತ್ತಡ ಕಂಡುಬಂತು. ಅಮೆರಿಕದ ಆರ್ಥಿಕ ಪುನಶ್ಚೇತನ ನಿರೀಕ್ಷಿತ ಮಟ್ಟದಲ್ಲಿ ಚೇತರಿಸಿಕೊಳ್ಳದಿರುವುದು ಮತ್ತು ಹೊಸ ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ಹಿಂದೆ ಬಿದ್ದಿರುವುದು ಜಾಗತಿಕ ಷೇರುಪೇಟೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಯೂರೋಪ್ ಮತ್ತು ಏಷ್ಯಾ  ಮಾರುಕಟ್ಟೆಯಲ್ಲೂ ಇದರ ಪ್ರತಿಫಲನ ಕಂಡುಬಂತು. 

 ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ದಿನದ ವಹಿವಾಟಿನಲ್ಲಿ 22 ಅಂಶಗಳಷ್ಟು ಕುಸಿತ ಕಂಡು 4,964 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.