ADVERTISEMENT

ಸೂಚ್ಯಂಕ: 226 ಅಂಶ ಏರಿಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST
ಸೂಚ್ಯಂಕ: 226 ಅಂಶ ಏರಿಕೆ
ಸೂಚ್ಯಂಕ: 226 ಅಂಶ ಏರಿಕೆ   

ಮುಂಬೈ (ಪಿಟಿಐ): ಮಂಗಳವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 226 ಅಂಶಗಳಷ್ಟು ಏರಿಕೆ ಪಡೆದಿದ್ದು, ಕಳೆದ ಎರಡು ವಾರಗಳಲ್ಲೇ ಗರಿಷ್ಠ ಮಟ್ಟ 17,813 ಅಂಶ ತಲುಪಿದೆ.

ಜಾಗತಿಕ ಷೇರುಪೇಟೆಗಳು ಚೇತರಿಸಿಕೊಂಡಿರುವುದು ಮತ್ತು ಜನವರಿ ತಿಂಗಳ ಕೈಗಾರಿಕೆ ಉತ್ಪಾದನೆ ಸೂಚ್ಯಂಕ (ಐಐಪಿ) ಗಣನೀಯ ಏರಿಕೆ ಕಂಡಿರುವುದು ಸೂಚ್ಯಂಕ ಜಿಗಿಯುವಂತೆ ಮಾಡಿದೆ. ಬಜೆಟ್‌ನ ಒತ್ತಡ ಇದ್ದರೂ, ಕಳೆದ ಎರಡು ವಹಿವಾಟು ಅವಧಿಗಳಲ್ಲಿ ಸೂಚ್ಯಂಕ ಒಟ್ಟಾರೆ 442 ಅಂಶಗಳಷ್ಟು ಏರಿಕೆ ಕಂಡಿರುವುದು ಗಮನಾರ್ಹವಾಗಿದೆ. ರೈಲ್ವೆ ಬಜೆಟ್, ಆರ್ಥಿಕ ಸಮೀಕ್ಷಾ ವರದಿ, `ಆರ್‌ಬಿಐ~ ಹಣಕಾಸು ಪರಾಮರ್ಶೆ ಮತ್ತು ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಮುಂದಿನ 3ದಿನಗಳಲ್ಲಿ ಷೇರುಪೇಟೆ ಗರಿಷ್ಠ ಏರಿಳಿತ ಕಾಣಲಿದೆ ಎಂದು ಬೋನಾಂಜ ಪೋರ್ಟ್ ಪೊಲಿಯೊ ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT