ADVERTISEMENT

ಸೂಚ್ಯಂಕ: 470 ಅಂಶ ಜಿಗಿತ

ಪಿಟಿಐ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ಸೂಚ್ಯಂಕ: 470 ಅಂಶ ಜಿಗಿತ
ಸೂಚ್ಯಂಕ: 470 ಅಂಶ ಜಿಗಿತ   

ಮುಂಬೈ: ಎರಡು ದಿನಗಳ ವಹಿವಾಟಿನಲ್ಲಿ ಇಳಿಮುಖವಾಗಿದ್ದ ಷೇರು‍ಪೇಟೆಗಳ ಚಟುವಟಿಕೆಯು ಸೋಮವಾರ ಉತ್ತಮ ಚೇತರಿಕೆ ಕಂಡುಕೊಂಡಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 470 ಅಂಶ ಜಿಗಿತ ಕಂಡು 33,006 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು. ದಿನದ ವಹಿವಾಟಿನಲ್ಲಿ 32,515 ಅಂಶಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಹಿಂದಿನ ಎರಡು ದಿನಗಳ ವಹಿವಾಟು ಅವಧಿಯಲ್ಲಿ ಸಂವೇದಿ ಸೂಚ್ಯಂಕ 540 ಅಂಶಗಳಷ್ಟು ಇಳಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 132 ಅಂಶ ಹೆಚ್ಚಾಗಿ 10,130 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ಉತ್ತಮ ಖರೀದಿ ವಹಿವಾಟಿಗೆ ಒಳಗಾಗಿ ಷೇರುಪೇಟೆ ವಹಿವಾಟು ಏರಿಕೆ ಕಂಡುಕೊಂಡಿತು. ಆದರೆ, ವಿಶ್ವ ವಾಣಿಜ್ಯ ಸಮರ ಆರಂಭವಾಗುವ ಭೀತಿಯು ಸೂಚ್ಯಂಕದ ಓಟಕ್ಕೆ ತುಸು ಅಡ್ಡಿಪಡಿಸಿತು‌ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಬ್ಯಾಂಕಿಂಗ್‌, ಲೋಹ, ಹಣಕಾಸು, ಗ್ರಾಹಕ ಬಳಕೆ ವಸ್ತುಗಳು, ವಾಹನ ಮತ್ತು ರಿಯಲ್ ಎಸ್ಟೇಟ್‌ ಷೇರುಗಳು ಉತ್ತಮ ಏರಿಕೆ ದಾಖಲಿಸಿದವು.

ಬ್ಯಾಂಕಿಂಗ್ ವಲಯದಲ್ಲಿ ಯೆಸ್‌ ಬ್ಯಾಂಕ್‌ (ಶೇ 5.67) ಮತ್ತು ಎಸ್‌ಬಿಐ (ಶೇ 5.01) ಷೇರುಗಳು ಗರಿಷ್ಠ ಗಳಿಕೆ ಕಂಡರೆ, ಸಾಫ್ಟ್‌ವೇರ್‌ ಸೇವಾ ರಫ್ತು ಸಂಸ್ಥೆಗಳಾದ ವಿಪ್ರೊ (ಶೇ 3.58) ಮತ್ತು ಇನ್ಫೊಸಿಸ್‌ (ಶೇ 1.13)  ಷೇರುಗಳು ನಷ್ಟಕ್ಕೆ ಒಳಗಾದವು. ಶುಕ್ರವಾರದ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ₹ 1,628 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 935 ಕೋಟಿ ಮೌಲ್ಯದ ಷೇರು ಗಳನ್ನು ಮಾರಾಟ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.