ADVERTISEMENT

`ಸೆಲ್ಕಾನ್' ಪರಿಚಯಿಸಿದ `ಎ119 ಸ್ಮಾರ್ಟ್‌ಫೋನ್'

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ಹೈದರಾಬಾದ್: ಸೆಲ್ಕಾನ್ ಮೊಬೈಲ್ಸ್ ತನ್ನ `ಸಿಗ್ನೇಚರ್ ಎಚ್‌ಡಿ' ಸರಣಿಯಲ್ಲಿ ಹೊಸದಾಗಿ `ಎ119 ಸ್ಮಾರ್ಟ್‌ಫೋನ್'  ಬಿಡುಗಡೆ ಮಾಡಿದೆ.
ಆಟೊ ಫೋಕಸ್ 12 ಮೆಗಾಪಿಕ್ಸೆಲ್ ಕ್ಯಾಮೆರಾ, 3 ಎಂ.ಪಿ. ಫ್ರಂಟ್ ಕ್ಯಾಮೆರಾ, 1 ಜಿ.ಬಿ ರ್‍ಯಾಮ್, ಆಂಡ್ರಾಯ್ಡ ಜೆಲ್ಲಿ ಬೀನ್ ಆಪರೇಟಿಂಗ್ ಸಿಸ್ಟಂ ಇರುವ ಈ ಸ್ಮಾರ್ಟ್‌ಫೋನ್ ಕೈಗೆಟುಕುವ (ರೂ. 13,499) ಬೆಲೆಗೆ ಲಭ್ಯವಿದೆ ಎಂದು `ಸೆಲ್ಕಾನ್ ಮೊಬೈಲ್ಸ್' ವ್ಯವಸ್ಥಾಪಕ ನಿರ್ದೇಶಕ ವೈ.ಗುರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

5.0 ಇಂಚು `ಐಪಿಎಸ್ ಹೈಡೆಫೆನಿಷನ್ ಡಿಸ್ಪ್ಲೆ'(ಎಚ್‌ಡಿ) ಸ್ಪರ್ಶಪರದೆ ಈ ಸ್ಮಾರ್ಟ್‌ಫೋನ್‌ನಲ್ಲಿದೆ. ಛಾಯಾಚಿತ್ರ, ಬಣ್ಣಗಳು ಅತ್ಯುತ್ತಮ ಗುಣಮಟ್ಟದಲ್ಲಿ ಗೋಚರಿಸುತ್ತವೆ. ಪರದೆ ಹೆಚ್ಚು ಪ್ರಖರಗೊಳಿಸಿದರೂ ಬ್ಯಾಟರಿ ಕಡಿಮೆ ಬಳಕೆ ಆಗುವುದು ವಿಶೇಷ. ಮೈ ಮ್ಯಾಂಗೊ, ಎಫ್ ಸೆಕ್ಯುರ್, ಒಪೆರಾ ಮಿನಿ, ನ್ಯೂಸ್ ಹಂಟ್ ಅಪ್ಲಿಕೇಷನ್ ಮೊದಲೇ ಅಳವಡಿಕೆಯಾಗಿವೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.