ADVERTISEMENT

ಸ್ಟಾರ್ಟ್‌ಅಪ್‌ಗೆ ನೆರವಿನ ಹಸ್ತ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST

ಬೆಂಗಳೂರು: ನವೋದ್ಯಮಗಳ ಪ್ರಗತಿಗೆ ನೆರವಾಗುತ್ತಿರುವ ‘ಸ್ಟಾರ್ಟ್‌ಅಪ್ಸ್‌ ಕ್ಲಬ್’, ಸದಸ್ಯತ್ವ ಅಭಿಯಾನ ಆರಂಭಿಸಿದೆ.

ನವೋದ್ಯಮಗಳ ಪ್ರಗತಿಗೆ ಪೂರಕವಾದ ಮಾರ್ಗದರ್ಶನ ನೀಡಲು ಕ್ಲಬ್‌ ಒತ್ತು ನೀಡಿದೆ. ಇದು ಸಮುದಾಯ ಆಧಾರಿತ ಕ್ಲಬ್ ಆಗಿದ್ದು, ನವೋದ್ಯಮಿಗಳನ್ನು ಒಟ್ಟುಗೂಡಿಸುವುದು  ಇದರ ಉದ್ದೇಶವಾಗಿದೆ.

‘ಸದಸ್ಯರಿಗೆ ಮಾಹಿತಿ ತಂತ್ರಜ್ಞಾನದ ನೆರವು, ಕಾನೂನು ಸಲಹೆ, ಇಂಟರ್‌ನೆಟ್ ಹಾಟ್‍ಸ್ಪಾಟ್ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ವ್ಯವಸ್ಥಾಪಕ ನಿರ್ದೇಶಕ ಸಲ್ಮಾ ಮೂಸಾ ತಿಳಿಸಿದ್ದಾರೆ. ಮಾಹಿತಿಗೆ ಅಂತರ್ಜಾಲ ತಾಣ startupsclub.com ಕ್ಕೆ ಭೇಟಿ ನೀಡಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.