ADVERTISEMENT

ಸ್ಪ್ರಿಂಗ್ ಪೀಪಲ್: ಕಾರ್ಪೊರೇಟ್ ತರಬೇತಿ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST
ಸ್ಪ್ರಿಂಗ್ ಪೀಪಲ್: ಕಾರ್ಪೊರೇಟ್ ತರಬೇತಿ ಕೇಂದ್ರ ಉದ್ಘಾಟನೆ
ಸ್ಪ್ರಿಂಗ್ ಪೀಪಲ್: ಕಾರ್ಪೊರೇಟ್ ತರಬೇತಿ ಕೇಂದ್ರ ಉದ್ಘಾಟನೆ   

ಬೆಂಗಳೂರು: ಮಾಹಿತಿ ತಂತ್ರಜ್ಞಾನ ರಂಗದ ವೃತ್ತಿನಿರತರಿಗೆ ಉನ್ನತ ಮಟ್ಟದ ತರಬೇತಿ ನೀಡುವ ಸ್ಪ್ರಿಂಗ್ ಪೀಪಲ್ ಸಾಫ್ಟ್‌ವೇರ್, ಬೆಂಗಳೂರಿನಲ್ಲಿ ದೇಶದಲ್ಲಿಯೇ ಮೊದಲನೇಯದಾದ ಕಾರ್ಪೊರೇಟ್ ತರಬೇತಿ ಕೇಂದ್ರ ಆರಂಭಿಸಿದೆ.

ಈ ತರಬೇತಿ ಕೇಂದ್ರದಲ್ಲಿ ಸ್ಪ್ರಿಂಗ್ ಫೇಮ್‌ವರ್ಕ್, ಅಂತರ್‌ಜಾಲ, ಮೊಬೈಲ್, ಕ್ಲೌಡ್ ಕಂಪ್ಯೂಟಿಂಗ್ ಮತ್ತಿತರ ರಂಗದಲ್ಲಿ ಐ.ಟಿ ವೃತ್ತಿನಿರತರಿಗೆ  ಅಗತ್ಯವಾದ ತರಬೇತಿ ನೀಡಲಾಗುವುದು ಎಂದು ವಿಮ್‌ವೇರ್‌ನ ವ್ಯವಸ್ಥಾಪಕ ನಿರ್ದೇಶಕ ಟಿ. ಶ್ರೀನಿವಾಸನ್ ಹೇಳಿದರು. ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಐ.ಟಿ ಸಂಸ್ಥೆಗಳ ಉದ್ಯೋಗಿಗಳಿಗೆ ಅಗತ್ಯವಾದ ಸಂಕೀರ್ಣಮಯ ಮತ್ತು ಭವಿಷ್ಯದಲ್ಲಿ ಜಾರಿಗೆ ಬರುವ ಹಲವಾರು ಅತ್ಯಾಧುನಿಕ ತಂತ್ರಜ್ಞಾನದ ತರಬೇತಿಯನ್ನು ವಿಮ್‌ವೇರ್‌ನ ಅಂಗಸಂಸ್ಥೆಯಾಗಿರುವ ಸ್ಪ್ರಿಂಗ್‌ಪೀಪಲ್ ಸಾಫ್ಟ್‌ವೇರ್ ನೀಡಲಿದೆ.

ADVERTISEMENT

ಬೆಂಗಳೂರಿನಲ್ಲಿ ಮೂರು ಕಡೆಗಳಲ್ಲಿ ಇಂತಹ ತರಬೇತಿ ಕೇಂದ್ರಗಳನ್ನು ಕ್ರಮೇಣ ಆರಂಭಿಸಲಾಗುವುದು. ಆನಂತರ ಹೈದರಾಬಾದ್ ಸೇರಿದಂತೆ ದೇಶದ ಇತರ ನಗರಗಳಿಗೂ ಈ ಸೌಲಭ್ಯ ವಿಸ್ತರಿಸಲಾಗುವುದು. ಐ.ಟಿ ಸಂಸ್ಥೆಗಳ ಉದ್ಯೋಗಿಗಳಿಗಾಗಿ ಅವರು ಕೆಲಸ ನಿರ್ವಹಿಸುವಲ್ಲಿಯೇ ತರಬೇತಿ ಆಯೋಜಿಸಲಾಗುವುದು. ತರಬೇತಿ ಕೇಂದ್ರದಲ್ಲಿ ನಡೆಯುವ 4 ದಿನಗಳ ಅಲ್ಪಾವಧಿ ತರಬೇತಿಯು ವೃತ್ತಿನಿರತರ ಕಾರ್ಯದಕ್ಷತೆ ಹೆಚ್ಚಿಸಲು ನೆರವಾಗಲಿದೆ ಎಂದು ಸ್ಪ್ರಿಂಗ್ ಪೀಪಲ್‌ನ ನಿರ್ದೇಶಕ ರವಿ ಕೆ. ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.