ADVERTISEMENT

ಸ್ಯಾಮ್ಸಂಗ್‌: 2 ಹೊಸ ಸ್ಮಾರ್ಟ್‌ಫೋನ್‌ ಪೇಟೆಗೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 20:43 IST
Last Updated 28 ಫೆಬ್ರುವರಿ 2018, 20:43 IST
ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್‌ ವಿಶ್ವ ಸಮಾವೇಶದಲ್ಲಿ ಹೊಸ ಮೊಬೈಲ್‌ಗಳನ್ನು ಪ್ರದರ್ಶಿಸಲಾಯಿತು    –ಎಎಫ್‌ಪಿ ಚಿತ್ರ
ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್‌ ವಿಶ್ವ ಸಮಾವೇಶದಲ್ಲಿ ಹೊಸ ಮೊಬೈಲ್‌ಗಳನ್ನು ಪ್ರದರ್ಶಿಸಲಾಯಿತು –ಎಎಫ್‌ಪಿ ಚಿತ್ರ   

ಬಾರ್ಸಿಲೋನಾ: ದಕ್ಷಿಣ ಕೊರಿಯಾದ ಪ್ರಮುಖ ವಿದ್ಯುನ್ಮಾನ ಉಪಕರಣಗಳ ತಯಾರಿಕಾ ಸಂಸ್ಥೆ ಸ್ಯಾಮ್ಸಂಗ್, ಗ್ಯಾಲಕ್ಸಿ ಎಸ್‌9 ಮತ್ತು ಎಸ್‌9+ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಐಫೋನ್‌ ಎಕ್ಸ್ ಮತ್ತು ಗೂಗಲ್‌ ಪಿಕ್ಸೆಲ್‌ 2 ಸಿರೀಸ್ ಮೊಬೈಲ್‌ಗಳಿಗೆ ಸ್ಪರ್ಧೆ ನೀಡಲು ಮತ್ತು ಗುಣಮಟ್ಟದ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಲು ಸಂಸ್ಥೆಯು ಈ  ಹೊಸ ಮೊಬೈಲ್‌  ತಯಾರಿಸಿದೆ.

ಮಾರ್ಚ್‌ 16ರಿಂದ ಇವು ಮಾರುಕಟ್ಟೆಯಲ್ಲಿ ಸಿಗಲಿವೆ ಎಂದು ಸಂಸ್ಥೆ ತಿಳಿಸಿದೆ. ಇ–ಕಾಮರ್ಸ್‌ ತಾಣ ಅಮೆಜಾನ್‌ನಲ್ಲಿ  ಈಗಿನಿಂದಲೇ ಬುಕಿಂಗ್ ಮಾಡಬಹುದು. ಇದರಲ್ಲಿರುವ ಎರಡು ಕ್ಯಾಮೆರಾಗಳ ಸಹಾಯದಿಂದ ಮಂದ  ಬೆಳಕಿನಲ್ಲೂ ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಬಹುದು.

ADVERTISEMENT

ಮುಖ ಸ್ಕ್ಯಾನ್ ಮಾಡಿದರೆ ನಮ್ಮ ಹಾವಭಾವಗಳಿಗೆ ತಕ್ಕಂತೆ ವರ್ತಿಸುವ, ಧ್ವನಿಸುವ ವಿಶೇಷವಾದ 18 ಎಮೊಜಿಗಳನ್ನು ಅಳವಡಿಸಲಾಗಿದೆ. ಜತೆಗೆ ಸ್ಯಾಮ್ಸಂಗ್‌ ಮತ್ತು ಇತರೆ ಉಪಕರಣಗಳೊಂದಿಗೆ ಸಂಪರ್ಕ ಬೆಸೆಯುವಂತಹ ಸ್ಮಾರ್ಟ್‌ಥಿಂಗ್ ತಂತ್ರಾಂಶವನ್ನೂ ಬಳಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.