ADVERTISEMENT

ಹತ್ತಿ ಖರೀದಿ ಸ್ಥಗಿತಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 19:30 IST
Last Updated 7 ಮಾರ್ಚ್ 2012, 19:30 IST

ಹುಬ್ಬಳ್ಳಿ:  ಕೇಂದ್ರ ಸರ್ಕಾರದ ರಫ್ತು ನಿಷೇಧ ಕ್ರಮ ವಿರೋಧಿಸಿ ರಾಜ್ಯದಾದ್ಯಂತ ಅನಿರ್ದಿಷ್ಟ ಕಾಲ ಹತ್ತಿ ಖರೀದಿ ನಿಲ್ಲಿಸಲು ಬುಧವಾರ ನಗರದಲ್ಲಿ ನಡೆದ ಹತ್ತಿ ವರ್ತಕರ ಹಾಗೂ ಜಿನ್ನಿಂಗ್ ಮಿಲ್‌ಗಳ ಮಾಲೀಕರ ಸಭೆಯಲ್ಲಿ ನಿರ್ಧರಿಸಲಾಯಿತು.

ಕರ್ನಾಟಕ ಕಾಟನ್ ಅಸೋಸಿಯೇಷನ್ ಅಧ್ಯಕ್ಷ ಪೂನಮ್‌ಚಂದ್ ಓಸ್ವಾಲ್ ಹಾಗೂ ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎನ್. ಪಿ. ಜವಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಫ್ತು ನಿಷೇಧ ಆದೇಶವನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆಯುವವರೆಗೆ ರೈತರಿಂದ ಹತ್ತಿ ಖರೀದಿ ಮಾಡದಿರಲು ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು.

ಹತ್ತಿಯನ್ನು ಮಾರುಕಟ್ಟೆಯಲ್ಲಿ ಅಥವಾ ಜಿನ್ನಿಂಗ್ ಮಿಲ್‌ಗಳಲ್ಲಿ ನೇರ ಖರೀದಿ ಸೇರಿದಂತೆ ಯಾವುದೇ ವಹಿವಾಟು ನಡೆಸದಂತೆ ತೀರ್ಮಾನಿಸಿದ ಸಭೆ ಪುನಃ ಹತ್ತಿ ಖರೀದಿ ಆರಂಭವಾಗುವವರೆಗೆ ಮಾರುಕಟ್ಟೆಗೆ ಮಾಲು ತರದಂತೆ ರೈತರಿಗೆ ಮನವಿ ಮಾಡಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.