ADVERTISEMENT

ಹೋಂಡಾ: ಸಿಟಿ ಎಂಜಿನ್ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 16:30 IST
Last Updated 17 ಫೆಬ್ರುವರಿ 2011, 16:30 IST

ನವದೆಹಲಿ (ಪಿಟಿಐ): ಜಪಾನಿನ ಪ್ರಮುಖ ವಾಹನ ತಯಾರಿಕಾ ಸಂಸ್ಥೆ ಹೋಂಡಾದ ಭಾರತದ ಅಂಗಸಂಸ್ಥೆಯಾಗಿರುವ ಹೋಂಡಾ ಸಿಯೆಲ್ ಕಾರ್ಸ್‌ ಇಂಡಿಯಾ (ಎಚ್‌ಸಿಸಿಐ), ತನ್ನ ಮಧ್ಯಮ ಗಾತ್ರದ ಸೇಡಾನ್ ಸಿಟಿ ಕಾರಿನ ಎಂಜಿನ್ ದೋಷ ಸರಿಪಡಿಸಲು ನಿರ್ಧರಿಸಿದೆ.

2008ರ ನವೆಂಬರ್‌ನಿಂದ 2009ರ ಡಿಸೆಂಬರ್ ತಿಂಗಳ ಅವಧಿಯಲ್ಲಿ ತಯಾರಿಸಲಾ ಹೊಸ ಮೂರನೇ ತಲೆಮಾರಿನ ಸಿಟಿ ಕಾರುಗಳ ದೋಷಪೂರಿತ ಎಂಜಿನ್‌ಗಳನ್ನು ಮಾತ್ರ ಬದಲಿಸಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

 ಈ ಉದ್ದೇಶಕ್ಕೆ 57,853 ಕಾರುಗಳನ್ನು ವಾಪಸ್ ಪಡೆಯಲಿದೆ.ದೋಷಪೂರಿತ ಎಂಜಿನ್ ಅನ್ನು ಉಚಿತವಾಗಿ ಬದಲಿಸಿಕೊಡಲಾಗುವುದು. ಈ ಎಂಜಿನ್ ಬದಲಾವಣೆ ಸೌಲಭ್ಯ ಪಡೆಯಲಿರುವ ಕಾರು ಮಾಲೀಕರಿಗೆ ಸಂಸ್ಥೆಯೇ ನೇರವಾಗಿ ವಿಷಯ ತಿಳಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.