ADVERTISEMENT

ಹೋಟೆಲ್‌ ಬಾಡಿಗೆ ಶೇ 6 ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ಮುಂಬೈ(ಪಿಟಿಐ): ದೇಶದಲ್ಲಿನ ಆತಿಥ್ಯ ಉದ್ಯಮ 2013ರಲ್ಲಿ ಬಹಳ ಸವಾಲುಗಳನ್ನು ಎದುರಿಸಿದ್ದರಿಂದ ಹೆಚ್ಚಿನ ಪ್ರಗತಿಯನ್ನೇನೂ ಕಾಣಲಾ­ಗಲಿಲ್ಲ. ಹಾಗಿದ್ದೂ ಹೋಟೆಲ್‌ಗಳು ಕೊಠಡಿ ಬಾಡಿಗೆ ಸೇರಿದಂತೆ ವಿವಿಧ ಆತಿಥ್ಯ ಸೇವೆಗಳ ಶುಲ್ಕವನ್ನು ಹಿಂದಿನ ವರ್ಷಕ್ಕಿಂತ ಶೇ 6ರಷ್ಟು ಏರಿಕೆ ಮಾಡಿದ್ದವು.

ಇದರಿಂದ ಹೋಟೆಲ್‌ ಕೊಠಡಿ­ಗಳ ಬಾಡಿಗೆ ರಾತ್ರಿಯೊಂದಕ್ಕೆ ಸರಾ­ಸರಿ ₨5,254ರಷ್ಟಕ್ಕೆ ಏರಿಕೆಯಾ­ಯಿತು.2012ರಲ್ಲಿ ಇದು ₨4,942ರಷ್ಟು ಇತ್ತು ಎಂದು ಹೋಟೆಲ್‌ ಡಾಟ್‌ ಕಾಂ ಸಂಸ್ಥೆಯ ‘ಹೋಟೆಲ್‌ ಪ್ರೈಸ್‌ ಇಂಡೆಕ್ಸ್‌’ನಲ್ಲಿ ತಿಳಿಸಲಾಗಿದೆ. ಥಾಯ್ಲೆಂಡ್‌ನಲ್ಲಿ ಶೇ 13ರಷ್ಟು, ಫಿಲಿಪ್ಪೀನ್ಸ್‌ನಲ್ಲಿ ಶೇ 11ರಷ್ಟು ಹೋಟೆಲ್‌ ಕೊಠಡಿ ಬಾಡಿಗೆ ಏರಿಕೆ­ಯಾಗಿತ್ತು ಎಂದು ಈ ಸೂಚ್ಯಂಕದಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.