ADVERTISEMENT

1,300 ವಿದೇಶಿ ಹೂಡಿಕೆದಾರರ ವಹಿವಾಟಿಗೆ ನೋಂದಣಿ

ಪಿಟಿಐ
Published 17 ಜೂನ್ 2018, 18:38 IST
Last Updated 17 ಜೂನ್ 2018, 18:38 IST

ನವದೆಹಲಿ: 2017–18ರಲ್ಲಿ ಹೊಸದಾಗಿ 1,300 ವಿದೇಶಿ ಹೂಡಿಕೆದಾರರು (ಎಫ್‌ಪಿಐ) ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯಲ್ಲಿ (ಸೆಬಿ) ನೋಂದಾಯಿಸಿಕೊಂಡಿದ್ದಾರೆ.

ಇದರಿಂದ ಮಾರ್ಚ್ ಅಂತ್ಯಕ್ಕೆ ಒಟ್ಟು ಎಫ್‌ಪಿಐ ಸಂಖ್ಯೆ 9,136ಕ್ಕೆ ತಲುಪಿದೆ.

ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಷೇರುಗಳು ಮತ್ತು ಬಾಂಡ್‌ಗಳ ಬಗ್ಗೆ ವಿದೇಶಿ ಹೂಡಿಕೆದಾರರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ‘ಸೆಬಿ’ ಹೇಳಿದೆ.

ADVERTISEMENT

2016–17ನೇ ಹಣಕಾಸು ವರ್ಷದಲ್ಲಿ ಹೊಸದಾಗಿ 3,500 ವಿದೇಶಿ ಹೂಡಿಕೆದಾರರು ನೋಂದಾಯಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.