ADVERTISEMENT

‘2ನೇ ತ್ರೈಮಾಸಿಕದಲ್ಲಿ ಜಿಡಿಪಿ ಚೇತರಿಕೆ’

ಪಿಟಿಐ
Published 7 ಅಕ್ಟೋಬರ್ 2017, 19:30 IST
Last Updated 7 ಅಕ್ಟೋಬರ್ 2017, 19:30 IST

ಗಾಂಧೀನಗರ: ‘ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಕಟವಾಗಿರುವ ಜಿಡಿಪಿ ಪ್ರಗತಿ ತಾತ್ಕಾಲಿಕ. ದೇಶದ ಆರ್ಥಿಕ ತಳಹದಿ ಸದೃಢವಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಚೇತರಿಸಿಕೊಳ್ಳಲಿದೆ’ ಎಂದು ರವಿಶಂಕರ ಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2017–18ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಮೂರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5.7ಕ್ಕೆ ಕುಸಿತ ಕಂಡಿದೆ. ಇದರಿಂದಾಗಿ ಸರ್ಕಾರದ ನೀತಿಗಳ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಅವರು ಅಸಮಾಧಾನ ಹೊರಹಾಕಿದ್ದಾರೆ.

‘ಜಿಡಿಪಿ 2014–15ರಲ್ಲಿ ಶೇ 7.5, 2015–16ರಲ್ಲಿ ಶೇ 8 ಹಾಗೂ 2016–17ರಲ್ಲಿ ಶೇ 7.1 ರಷ್ಟು ಪ್ರಗತಿ ಕಂಡಿದೆ. ಹೀಗಿರುವಾಗ ಕೇವಲ ಮೊಲದ ತ್ರೈಮಾಸಿಕದ ಪ್ರಗತಿಯನ್ನು ಇಟ್ಟುಕೊಂಡು ಟೀಕಿಸುವುದು ಸರಿಯಲ್ಲ’ ಎಂದಿದ್ದಾರೆ.

ADVERTISEMENT

‘ಜಿಎಸ್‌ಟಿ ಸಂಪೂರ್ಣವಾಗಿ ಹೊಸ ವ್ಯವಸ್ಥೆಯಾಗಿದೆ. ಇದರಿಂದ ಆರಂಭದಲ್ಲಿ ಕೆಲವು ಸಮಸ್ಯೆಗಳು ಎದುರಾಗುವುದು ಸಹಜ. ಉದ್ಯಮ ವಲಯ ಜಿಎಸ್‌ಟಿಗೆ ಹೊಂದಿಕೊಂಡ ಬಳಿಕ ಆರ್ಥಿಕತೆ ಸಹಜ ಸ್ಥಿತಿಗೆ ಮರಳಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.