ADVERTISEMENT

3 ವಿಮೆ ಸಂಸ್ಥೆಗಳ ಸಾಲ ನೀಡಿಕೆ ಸಾಮರ್ಥ್ಯ ಹೆಚ್ಚಳ

ಪಿಟಿಐ
Published 22 ಮಾರ್ಚ್ 2018, 20:16 IST
Last Updated 22 ಮಾರ್ಚ್ 2018, 20:16 IST

ನವದೆಹಲಿ: ನ್ಯಾಷನಲ್‌ ಇನ್ಶುರನ್ಸ್‌, ಯುನೈಟೆಡ್‌ ಇಂಡಿಯಾ ಇನ್ಶುರನ್ಸ್‌ ಮತ್ತು ಓರಿಯಂಟಲ್‌ ಇಂಡಿಯಾ ಇನ್ಶುರನ್ಸ್‌ ಸಂಸ್ಥೆಗಳ ವಿಲೀನದಿಂದ ಅವುಗಳ ಸಾಲ ನೀಡಿಕೆ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

‘ಸರ್ಕಾರಿ ಸ್ವಾಮ್ಯದ ಮೂರು ವಿಮಾ ಸಂಸ್ಥೆಗಳನ್ನು ವಿಲೀನಗೊಳಿಸಿ ಒಂದು ಸಂಸ್ಥೆಯನ್ನಾಗಿ ಮಾಡಲಾಗುವುದು. ಇದರಿಂದ ಮೂಲಸೌಕರ್ಯದ ಸದ್ಭಳಕೆ ಮತ್ತು ಸಾಲ ನೀಡಿಕೆ ಸಾಮರ್ಥ್ಯ ಸುಧಾರಿಸಲಿದೆ’ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ ಶುಕ್ಲಾ ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

2016–17ರಲ್ಲಿ ಮೂರು ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಪಾಲು ಶೇ 34.73 ರಷ್ಟಿತ್ತು. ಅದೇ ಅವಧಿಯಲ್ಲಿ ಯುನೈಟೆಡ್‌ ಇಂಡಿಯಾ ಇನ್ಶುರನ್ಸ್ ಮತ್ತು ಓರಿಯಂಟಲ್‌ ಇನ್ಶುರನ್ಸ್‌ ನಷ್ಟ ಕಂಡಿದ್ದರೆ, ನ್ಯಾಷನಲ್ ಇನ್ಶುರನ್ಸ್ ಲಾಭ ಇಳಿಕೆ ಕಂಡಿತ್ತು.

ADVERTISEMENT

ಫೆಬ್ರುವರಿ 1 ರ ಬಜೆಟ್‌ ಭಾಷಣದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮೂರು ವಿಮಾ ಸಂಸ್ಥೆಗಳನ್ನು ವಿಲೀನಗೊಳಿಸುವ ಪ್ರಸ್ತಾವವನ್ನು ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.