ADVERTISEMENT

ಓಲಾ, ಐಸಿಐಸಿಐ ಬ್ಯಾಂಕ್‌ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST

ಬೆಂಗಳೂರು: ಗ್ರಾಹಕರು ಮತ್ತು ಚಾಲಕ ಪಾಲುದಾರರ ಅನುಕೂಲಕ್ಕಾಗಿ ಟ್ಯಾಕ್ಸಿ ಬಾಡಿಗೆ ಸಂಸ್ಥೆ ಓಲಾ ಮತ್ತು ಐಸಿಐಸಿಐ ಬ್ಯಾಂಕ್‌ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ಒಪ್ಪಂದದ ಫಲವಾಗಿ ಐಸಿಐಸಿಐ ಬ್ಯಾಂಕ್‌ ಗ್ರಾಹಕರು  ತಮ್ಮ ಮೊಬೈಲ್‌ ಬ್ಯಾಂಕಿಂಗ್‌ ಆ್ಯಪ್‌ಗಳಾದ ‘ಐಮೊಬೈಲ್‌’ ಮತ್ತು ‘ಪಾಕೆಟ್ಸ್‌’ ಮೂಲಕ ಟ್ಯಾಕ್ಸಿ ಬುಕಿಂಗ್‌, ಬಾಡಿಗೆ ಪಾವತಿ ಮಾಡಬಹುದು. ಓಲಾ ಬಳಕೆದಾರರು ಟ್ಯಾಕ್ಸಿ ಬಾಡಿಗೆ ಪಾವತಿಸಲು, ಐಸಿಐಸಿಐ ಬ್ಯಾಂಕ್‌ನಿಂದ ಸಣ್ಣ ಪ್ರಮಾಣದಲ್ಲಿ ತಕ್ಷಣಕ್ಕೆ ಡಿಜಿಟಲ್‌ ಸಾಲವನ್ನೂ ಪಡೆಯಬಹುದು. ಓಲಾದ ಚಾಲಕ ಪಾಲುದಾರರಿಗೂ ಐಸಿಐಸಿಐ ಬ್ಯಾಂಕ್‌ ‘ಪೇ ಡೈರೆಕ್ಟ್‌ ಕಾರ್ಡ್‌’ ನೀಡಲಿದೆ. ಚಾಲಕರ ದಿನದ ಗಳಿಕೆಯನ್ನು ಈ ಕಾರ್ಡ್‌ಗೆ ನೇರವಾಗಿ ಪಾವತಿಸಲಾಗುತ್ತಿದೆ. ಚಾಲಕರು ಈ ಕಾರ್ಡ್‌ ಮೂಲಕ ಮಳಿಗೆಗಳಲ್ಲಿ ಖರೀದಿಸುವ ಸರಕಿಗೆ ಹಣ ಪಾವತಿಸಬಹುದು. ಓಲಾದ ಸಹಯೋಗದಲ್ಲಿ ಐಸಿಐಸಿಐ ಬ್ಯಾಂಕ್‌ ‘ಸಹ ಬ್ರ್ಯಾಂಡ್‌ನ ಕ್ರೆಡಿಟ್‌ ಕಾರ್ಡ್‌’ ವಿತರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT