ADVERTISEMENT

ಬಜಾಜ್‍: ಹೊಸ ಅವೆಂಜರ್ ಬೈಕ್‍ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST
ಸಂಸ್ಥೆಯ ಮೋಟರ್‍ಸೈಕಲ್ಸ್ ವಿಭಾಗದ ಅಧ್ಯಕ್ಷ ಎರಿಕ್ ವಾಸ್ ಅವರು ಹೊಸ ಬೈಕ್‌ಗಳನ್ನು ಮಂಗಳವಾರ ಬೆಂಗಳೂರಿನಲ್ಲಿ ಪರಿಚಯಿಸಿದರು
ಸಂಸ್ಥೆಯ ಮೋಟರ್‍ಸೈಕಲ್ಸ್ ವಿಭಾಗದ ಅಧ್ಯಕ್ಷ ಎರಿಕ್ ವಾಸ್ ಅವರು ಹೊಸ ಬೈಕ್‌ಗಳನ್ನು ಮಂಗಳವಾರ ಬೆಂಗಳೂರಿನಲ್ಲಿ ಪರಿಚಯಿಸಿದರು   

ಬೆಂಗಳೂರು: ಬಜಾಜ್ ಆಟೊ ಹೊಸ ವರ್ಷಕ್ಕೆ ತನ್ನ ಅವೆಂಜರ್ ಸರಣಿಯ ಹೊಸ ‘ಕ್ರೂಸ್ 220’ ಮತ್ತು ‘ಸ್ಟ್ರೀಟ್ 220’ ಶ್ರೇಣಿಯ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

‘ಅವೇಂಜರ್ 220 ಕ್ರೂಸ್’, ಹೊಸತನ ಅಳವಡಿಸಿಕೊಂಡ ಆಕರ್ಷಕ ಬೈಕ್ ಆಗಿದೆ. ಆಕರ್ಷಕ ಮತ್ತು ವಿನ್ಯಾಸಗಳ ವೈಶಿಷ್ಟ್ಯತೆ  ಹೊಂದಿವೆ. ಇವೆರಡೂ ಬೈಕ್‌ಗಳು ಎರಡು ಪ್ರತ್ಯೇಕ ಬಣ್ಣಗಳಲ್ಲಿ ಲಭ್ಯ ಇವೆ. ಈ ಬೈಕ್‍ಗಳು ಅತ್ಯಾಕರ್ಷಕವಾದ ವಿನ್ಯಾಸ ಮತ್ತು ಆಕರ್ಷಣೆಯೊಂದಿಗೆ ಹೊಸ ಮೈಲುಗಲ್ಲು ಸ್ಥಾಪಿಸಲಿವೆ’ ಎಂದು ಸಂಸ್ಥೆಯ ಮೋಟರ್‍ಸೈಕಲ್ಸ್ ವಹಿವಾಟಿನ ಅಧ್ಯಕ್ಷ ಎರಿಕ್ ವಾಸ್ ಹೇಳಿದ್ದಾರೆ. ರಾಜ್ಯದಲ್ಲಿನ ಇವುಗಳ ಎಕ್ಸ್‌ಷೋರೂಂ ಬೆಲೆ ₹ 92,954 ರಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT