ADVERTISEMENT

ಭಾರತದ ಮಾರುಕಟ್ಟೆಗೆ ರೇಂಜ್‌ ರೋವರ್‌ ವೆಲಾರ್‌

ಪಿಟಿಐ
Published 22 ಜನವರಿ 2018, 19:30 IST
Last Updated 22 ಜನವರಿ 2018, 19:30 IST
ಜಾಗ್ವರ್‌ ಲ್ಯಾಂಡ್ ರೋವರ್‌ ಇಂಡಿಯಾದ ಅಧ್ಯಕ್ಷ ರೋಹಿತ್‌ ಸೂರಿ ಅವರು ರೇಂಜ್‌ ರೋವರ್‌ ವೆಲಾರ್‌ ಎಸ್‌ಯುವಿ ಬಿಡುಗಡೆ ಮಾಡಿದರು
ಜಾಗ್ವರ್‌ ಲ್ಯಾಂಡ್ ರೋವರ್‌ ಇಂಡಿಯಾದ ಅಧ್ಯಕ್ಷ ರೋಹಿತ್‌ ಸೂರಿ ಅವರು ರೇಂಜ್‌ ರೋವರ್‌ ವೆಲಾರ್‌ ಎಸ್‌ಯುವಿ ಬಿಡುಗಡೆ ಮಾಡಿದರು   

ನವದೆಹಲಿ: ಲ್ಯಾಂಡ್‌ ರೋವರ್‌ ಕಂಪನಿಯು ರೇಂಜ್‌ ರೋವರ್‌ನ ನಾಲ್ಕನೇ ಮಾದರಿಯಾಗಿರುವ ರೇಂಜ್‌ ರೋವರ್ ವೆಲಾರ್‌ ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಭಾರತದಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 78.83 ಲಕ್ಷದಿಂದ ಆರಂಭವಾಗಲಿದೆ. 2.0 ಮತ್ತು 3.0 ಲೀಟರ್‌ ಡೀಸೆಲ್‌, 2.0 ಲೀಟರ್‌ ಪೆಟ್ರೋಲ್‌ ಎಂಜಿನ್‌ಗಳಲ್ಲಿ ಲಭ್ಯವಿದೆ.

ಬಹುನಿರೀಕ್ಷಿತ ಐಷಾರಾಮಿ ಎಸ್‌ಯುವಿ ಇದಾಗಿದ್ದು, ಭಾರತದಲ್ಲಿ ಕಂಪನಿಯ ಮಾರಕಟ್ಟೆ ಗಾತ್ರವನ್ನು ವಿಸ್ತರಿಸಲಿದೆ ಎಂದು ಜಾಗ್ವರ್‌ ಲ್ಯಾಂಡ್‌ ರೋವರ್‌ ಇಂಡಿಯಾದ ಅಧ್ಯಕ್ಷ ರೋಹಿತ್‌ ಸೂರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.