ADVERTISEMENT

ದೇಶದ ಷೇರುಪೇಟೆ ದಾಖಲೆ: 11,000 ಅಂಶ ದಾಟಿದ ನಿಫ್ಟಿ, 36,000 ಅಂಶ ಮುಟ್ಟಿದ ಸೆನ್ಸೆಕ್ಸ್‌

ಏಜೆನ್ಸೀಸ್
Published 23 ಜನವರಿ 2018, 5:46 IST
Last Updated 23 ಜನವರಿ 2018, 5:46 IST
ದೇಶದ ಷೇರುಪೇಟೆ ದಾಖಲೆ: 11,000 ಅಂಶ ದಾಟಿದ ನಿಫ್ಟಿ, 36,000 ಅಂಶ ಮುಟ್ಟಿದ ಸೆನ್ಸೆಕ್ಸ್‌
ದೇಶದ ಷೇರುಪೇಟೆ ದಾಖಲೆ: 11,000 ಅಂಶ ದಾಟಿದ ನಿಫ್ಟಿ, 36,000 ಅಂಶ ಮುಟ್ಟಿದ ಸೆನ್ಸೆಕ್ಸ್‌   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಸೂಚ್ಯಂಕ ಗರಿಷ್ಠ ಮಟ್ಟ ತಲುಪಿದ್ದು, ಐತಿಹಾಸಿಕ ದಾಖಲೆ ಸೃಷ್ಟಿಯಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 159.98 ಅಂಶ ಜಿಗಿತ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟ 35,957.99 ಅಂಶಗಳ ಗಡಿ ದಾಟಿ ವಹಿವಾಟು ಮುಂದುವರಿದಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 56.80 ಅಂಶ ಏರಿಕೆ ಕಂಡು, ಸಾರ್ವಕಾಲಿಕ ದಾಖಲೆ ಮಟ್ಟವಾದ 11,02‌3 ಅಂಶಗಳನ್ನು ತಲುಪಿದೆ.

ADVERTISEMENT

ವಿದೇಶಿ ಬಂಡವಾಳ ಒಳಹರಿವು ನಿರಂತರವಾಗಿದೆ. ದೇಶಿ ಹೂಡಿಕೆದಾರರು ಉತ್ತಮ ಖರೀದಿ ಚಟುವಟಿಕೆ ನಡೆಸುತ್ತಿದ್ದಾರೆ. ಇದು ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟಿಗೆ ಕಾರಣವಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಇದೇ ವೇಳೆ ಡಾಲರ್‌ ಎದುರು ರೂಪಾಯಿ ಮೌಲ್ಯ 5ಪೈಸೆಯಷ್ಟು ಏರಿಕೆ ಕಂಡಿದೆ. ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 63.82ರಂತೆ ವಿನಿಮಯವಾಗಿದೆ.

ಪ್ರಸ್ತುತ ಬಿಎಸ್‌ಇ 36,035 ಅಂಶ ಹಾಗೂ ಎನ್ಎಸ್‌ಇ 11,048 ಅಂಶ ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.