ADVERTISEMENT

ಸ್ಯಾಮ್ಸಂಗ್‌ ಹಿಂದಿಕ್ಕಿದ ಶಿಯೋಮಿ

ಪಿಟಿಐ
Published 25 ಜನವರಿ 2018, 19:30 IST
Last Updated 25 ಜನವರಿ 2018, 19:30 IST
ಸ್ಯಾಮ್ಸಂಗ್‌ ಹಿಂದಿಕ್ಕಿದ ಶಿಯೋಮಿ
ಸ್ಯಾಮ್ಸಂಗ್‌ ಹಿಂದಿಕ್ಕಿದ ಶಿಯೋಮಿ   

ನವದೆಹಲಿ: ದೇಶದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಚೀನಾದ ಮೊಬೈಲ್‌ ತಯಾರಿಕಾ ಸಂಸ್ಥೆ ಶಿಯೋಮಿ, ದಕ್ಷಿಣ ಕೊರಿಯಾದ ಸ್ಯಾಮ್ಸಂಗ್‌ ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದೆ.

ಶಿಯೋಮಿಯು ಈಗ ದೇಶದ ಮುಂಚೂಣಿ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ. 6 ವರ್ಷಗಳಿಂದ ದೇಶಿ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿ ಇದ್ದ ಸ್ಯಾಮ್ಸಂಗ್‌ ಈಗ ದ್ವಿತೀಯ ಸ್ಥಾನಕ್ಕೆ ಇಳಿದಿದೆ ಎಂದು ಕ್ಯಾನಲಿಸ್‌ ಆ್ಯಂಡ್‌ ಕೌಂಟರ್‌ಪಾಯಿಂಟ್‌ ರಿಸರ್ಚ್‌ ಸಂಸ್ಥೆ ತಿಳಿಸಿದೆ.

ಈ ಸಂಸ್ಥೆಯ ವರದಿ ಪ್ರಕಾರ, ಶಿಯೋಮಿಯು ವರ್ಷದ ಹಿಂದಿನ ಶೇ 9ರಷ್ಟಿದ್ದ ಮಾರುಕಟ್ಟೆ ಪಾಲನ್ನು ನಾಲ್ಕನೇ ತ್ರೈಮಾಸಿಕದ ವೇಳೆಗೆ ಶೇ 25ರಷ್ಟಕ್ಕೆ ಹೆಚ್ಚಿಸಿಕೊಳ್ಳಲಿದೆ. ಅಕ್ಟೋಬರ್‌ – ಡಿಸೆಂಬರ್‌ ತ್ರೈಮಾಸಿಕದಲ್ಲಿ ಸ್ಯಾಮ್ಸಂಗ್‌ನ ಮಾರುಕಟ್ಟೆ ಪಾಲು ಶೇ 24 ರಿಂದ ಶೇ 23ಕ್ಕೆ ಇಳಿಕೆಯಾಗಿದೆ. ಮುಂಚೂಣಿ ಐದು ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳ ಪೈಕಿ ಲೆನೆವೊ, ವಿವೊ ಮತ್ತು ಒಪ್ಪೊ ಕೂಡ ಇವೆ.

ADVERTISEMENT

‘ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಶಿಯೋಮಿ ತನ್ನ ಆಕ್ರಮಣಕಾರಿ ಬೆಲೆ ನೀತಿ, ಪರಿಣಾಮಕಾರಿಯಾದ ವಿಸ್ತರಣಾ ನೀತಿಯಿಂದ ತನ್ನ ವಹಿವಾಟನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡಿದೆ. ಇದರಿಂದಾಗಿಯೇ ದೀರ್ಘಕಾಲದಿಂದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದ ಸ್ಯಾಮ್ಸಂಗ್‌ ಹಿಂದಿಕ್ಕಲು ಸಾಧ್ಯವಾಗಿದೆ’ ಎಂದು ಕೌಂಟರ್‌ಪಾಯಿಂಟ್‌ನ ಸಂಶೋಧನಾ ನಿರ್ದೇಶಕ ತರುಣ್ ‍ಪಾಠಕ್‌ ಹೇಳಿದ್ದಾರೆ.

ತಾನು ಈಗಲೂ ಭಾರತದಲ್ಲಿ ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಲ್ಲಿ ಮೊದಲ ಸ್ಥಾನದಲ್ಲಿಯೇ ಇರುವುದಾಗಿ ಸ್ಯಾಮ್ಸಂಗ್‌ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.