ADVERTISEMENT

ಲಾಭಕೋರತನ: ಒಂಬತ್ತು ‍ಪ್ರಕರಣ ತನಿಖೆಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 19:15 IST
Last Updated 9 ಫೆಬ್ರುವರಿ 2018, 19:15 IST
ಲಾಭಕೋರತನ: ಒಂಬತ್ತು ‍ಪ್ರಕರಣ ತನಿಖೆಗೆ ನೋಟಿಸ್‌
ಲಾಭಕೋರತನ: ಒಂಬತ್ತು ‍ಪ್ರಕರಣ ತನಿಖೆಗೆ ನೋಟಿಸ್‌   

ಮುಂಬೈ: ‘ಜಿಎಸ್‌ಟಿ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಇರುವುದಕ್ಕೆ ಸಂಬಂಧಿಸಿದಂತೆ 9 ಪ್ರಕರಣಗಳ ತನಿಖೆಗೆ ನೋಟಿಸ್‌ ಜಾರಿ ಮಾಡಲಾಗಿದೆ‘ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಲಾಭಕೋರತನಕ್ಕೆ ಸಂಬಂಧಿಸಿದಂತೆ 2018ರ ಜನವರಿ 31ರವರೆಗೆ ಒಟ್ಟು 221 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 50 ಅರ್ಜಿಗಳನ್ನು ಒಳಗೊಂಡ 9 ಪ್ರಕರಣಗಳ ತನಿಖೆಗೆ ನೊಟೀಸ್‌ ನೀಡಲಾಗಿದೆ.

ಈ ದೂರುಗಳ ಪರಿಶೀಲನೆಗೆ ರಾಷ್ಟ್ರೀಯ ಲಾಭಕೋರತನ ತಡೆ ಪ್ರಾಧಿಕಾರ ಮತ್ತು ಸ್ಥಾಯಿ ಸಮಿತಿ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಜನವರಿಯಲ್ಲಿ ₹ 88,929 ಕೋಟಿ ತೆರಿಗೆ ಸಂಗ್ರಹವಾಗುವ ಅಂದಾಜು ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.