ADVERTISEMENT

ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ಮುಂಬೈ: ಸತತ ಮೂರು ವಹಿವಾಟಿನ ದಿನಗಳಲ್ಲಿ ಕುಸಿತ ಕಂಡಿದ್ದ ಷೇರುಪೇಟೆ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿತು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಷೇರುಗಳಲ್ಲಿನ ಚೇತರಿಕೆ ಮತ್ತು ಐ.ಟಿ ಷೇರುಗಳಲ್ಲಿನ ಖರೀದಿ ಭರಾಟೆ ಕಾರಣಕ್ಕೆ ಸೂಚ್ಯಂಕವು 141 ಅಂಶಗಳ ಏರಿಕೆ ಕಂಡಿತು. ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ), ತೈಲ ಮತ್ತು  ನೈಸರ್ಗಿಕ ಅನಿಲ ಷೇರುಗಳಲ್ಲಿನ ಖರೀದಿ ಆಸಕ್ತಿಯೂ ಪೇಟೆಯಲ್ಲಿ ಉತ್ಸಾಹ ಮೂಡಿಸಿತು.

ಪೇಟೆಗೆ ಹೊಸ ದಿಕ್ಕು ನೀಡುವ ವಿದ್ಯಮಾನಕ್ಕಾಗಿ ವಹಿವಾಟುದಾರರು ಎದುರು ನೋಡುತ್ತಿದ್ದಾರೆ. ಹಣದು
ಬ್ಬರ ಮತ್ತು ಬಡ್ಡಿ ದರ ಹೆಚ್ಚಳಕ್ಕೆ ಸಂಬಂಧಿಸಿದ ಆತಂಕಗಳು ಸದ್ಯಕ್ಕೆ ಅವರನ್ನು ನಿರುತ್ಸಾಹಗೊಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.