ADVERTISEMENT

62.5 ಲಕ್ಷ ಟನ್‌ಗಳಿಗೆ ಕುಸಿದ ಉಕ್ಕು ತಯಾರಿಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 19:30 IST
Last Updated 24 ಡಿಸೆಂಬರ್ 2013, 19:30 IST

ನವದೆಹಲಿ(ಪಿಟಿಐ): ನವೆಂಬರ್‌ನಲ್ಲಿನ ದೇಶದ ಉಕ್ಕು ತಯಾರಿಕೆ ಪ್ರಮಾಣ ಕಳೆದ 14 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ನವೆಂಬರ್‌ನಲ್ಲಿ 62.50 ಲಕ್ಷ ಟನ್‌ ಉಕ್ಕು ತಯಾರಾಗಿದೆ. 2012ರ ಸೆಪ್ಟೆಂಬರ್‌ನಲ್ಲಿ 62.99 ಲಕ್ಷ ಟನ್‌ ಉಕ್ಕು ಈ ಹಿಂದಿನ ಕಡಿಮೆ ತಯಾರಿಕೆಯಾಗಿದೆ. ನಂತರ 2013ರ ನವೆಂಬರ್‌ನಲ್ಲಿ ಮತ್ತೊಮ್ಮೆ ಕುಸಿತವಾ ಗಿದೆ. ಜುಲೈನಲ್ಲಿ ಗರಿಷ್ಠ 66.68 ಲಕ್ಷ ಟನ್‌ ಉಕ್ಕು ತಯಾರಾಗಿತ್ತು.

ವಾಹನ ಉದ್ಯಮ ಚಟುವಟಿಕೆ ಇಳಿ ಮುಖವಾಗಿದ್ದರಿಂದ ಉಕ್ಕು ಬೇಡಿಕೆಯೂ ತಗ್ಗಿತು. ಉಕ್ಕು  ಮೂಲ ಸಾಮಗ್ರಿಯಾಗಿ ಆಧರಿಸಿರುವ ಹತ್ತಾರು ಉದ್ಯಮ ಕ್ಷೇತ್ರಗಳಿಂದಲೂ ಬೇಡಿಕೆ ತಗ್ಗಿತು. ಹಾಗಾಗಿ ಉಕ್ಕು ಕಂಪೆನಿಗಳೂ ಚಟುವಟಿಕೆ ಕಡಿಮೆ ಮಾಡಿದವು ಎಂದು ಉದ್ಯಮದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.