ADVERTISEMENT

8ತಿಂಗಳಲ್ಲೇ ಕನಿಷ್ಠ ಮಟ್ಟಕ್ಕಿಳಿದ ಚಿನ್ನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST

ಮುಂಬೈ/ನವದೆಹಲಿ(ಪಿಟಿಐ): ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಗ್ಗಿದ ವಹಿವಾಟು ಮತ್ತು ದೇಶೀಯ ಚಿನಿವಾರ ಪೇಟೆಯಲ್ಲಿಯೂ ಬೇಡಿಕೆ ಇಳಿಕೆಯಾಗಿ ದ್ದರ ಪರಿಣಾಮ ಚಿನ್ನದ ಧಾರಣೆ ಬುಧವಾರ ನವದೆಹಲಿಯಲ್ಲಿ ರೂ. 500, ಮುಂಬೈನಲ್ಲಿರೂ. 340ರಷ್ಟು ತಗ್ಗಿತು.

10 ಗ್ರಾಂ ಸ್ಟಾಂಡರ್ಡ್ ಚಿನ್ನದ ಬೆಲೆ ಮುಂಬೈನಲ್ಲಿ 8 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ(ರೂ.29,195), ನವದೆಹಲಿಯಲ್ಲಿ 9 ತಿಂಗಳ ಕನಿಷ್ಠ ಮಟ್ಟಕ್ಕೆ(ರೂ.29,400) ಇಳಿದಿದೆ.

ಅಪರಂಜಿ ಚಿನ್ನ 10 ಗ್ರಾಂಗೆ ಮುಂಬೈನಲ್ಲಿರೂ. 29,335ರಲ್ಲಿ ನವದೆಹಲಿಯಲ್ಲಿ ರೂ. 29,600ರಲ್ಲಿ ಮಾರಾಟವಾಗಿದೆ. ಕೆ.ಜಿ. ಬೆಳ್ಳಿ ಧಾರಣೆಯೂ ಮುಂಬೈನಲ್ಲಿ ರೂ.1290ರಷ್ಟು ತಗ್ಗಿ ರೂ. 52,000ಕ್ಕೆ, ನವದೆಹಲಿಯಲ್ಲಿ ರೂ. 1950ರಷ್ಟು ಇಳಿಕೆಯಾಗಿ ರೂ. 51,250ಕ್ಕೆ ಬಂದಿದೆ. ಇದು 15 ತಿಂಗಳಲ್ಲಿಯೇ ಬೆಳ್ಳಿಯ ಕನಿಷ್ಠ ಮಟ್ಟದ ಧಾರಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.