ADVERTISEMENT

ಸತತ ಐದನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ 6ನೇ ಹಣಕಾಸು ಸಚಿವೆ ನಿರ್ಮಲಾ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 5:48 IST
Last Updated 1 ಫೆಬ್ರುವರಿ 2023, 5:48 IST
   

ನವದೆಹಲಿ: ಸ್ವಾತಂತ್ರ್ಯ ಭಾರತದಲ್ಲಿ ಸತತ ಐದನೇ ಬಜೆಟ್ ಮಂಡಿಸುತ್ತಿರುವ 6ನೇ ಹಣಕಾಸು ಸಚಿವೆ ಎಂಬ ಖ್ಯಾತಿಗೆ ನಿರ್ಮಲಾ ಸೀತಾರಾಮನ್ ಆಗಿದ್ದಾರೆ. ಈ ಮೂಲಕ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಿ. ಚಿದಂಬರಂ, ಅರುಣ್ ಜೇಟ್ಲಿ ಸಾಲಿಗೆ ಸೇರಿದ್ದಾರೆ.

2019ರಿಂದ 2023ರವರೆಗೆ ಇದು ಅವರು ಮಂಡಿಸುತ್ತಿರುವ ಸತತ ಐದನೇ ಬಜೆಟ್ ಆಗಿದೆ.

ಈ ಹಿಂದೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಿ. ಚಿದಂಬರಂ, ಅರುಣ್ ಜೇಟ್ಲಿ, ಯಶವಂತ್ ಸಿನ್ಹಾ, ಮೊರಾರ್ಜಿ ದೇಸಾಯಿ ಅವರು ಸತತ 5 ಬಜೆಟ್ ಮಂಡಿಸಿದ್ದರು.

ADVERTISEMENT

2014ರಲ್ಲಿ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಜೇಟ್ಲಿ 2014-15ರಿಂದ 2018-19ರವರೆಗೆ ಸತತವಾಗಿ ಐದು ಬಜೆಟ್‌ಗಳನ್ನು ಮಂಡಿಸಿದ್ದರು.

ಜೇಟ್ಲಿ ಅವರ ಅನಾರೋಗ್ಯದ ಕಾರಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದ ಪಿಯೂಷ್ ಗೋಯಲ್ ಅವರು 2019-20 ರ ಮಧ್ಯಂತರ ಬಜೆಟ್ ಅಥವಾ ವೋಟ್ ಆನ್ ಅಕೌಂಟ್ ಅನ್ನು ಮಂಡಿಸಿದ್ದರು.

2019ರ ಸಾರ್ವತ್ರಿಕ ಚುನಾವಣೆಯ ನಂತರ, ಮೋದಿ 2.0 ಸರ್ಕಾರದಲ್ಲಿ, ಸೀತಾರಾಮನ್ ಅವರಿಗೆ ಹಣಕಾಸು ಖಾತೆಯನ್ನು ನೀಡಲಾಯಿತು.

ಸೀತಾರಾಮನ್ ಅವರ ಅಧಿಕಾರಾವಧಿಯಲ್ಲಿ, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಯಿತು. ಅಲ್ಲದೆ, ವಿಶ್ವ ಆರ್ಥಿಕತೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆ ಭಾರತಕ್ಕೆ ಸಿಕ್ಕಿದೆ.

1970-71ರ ಆರ್ಥಿಕ ವರ್ಷದಲ್ಲಿ ಬಜೆಟ್ ಮಂಡಿಸಿದ ಇಂದಿರಾ ಗಾಂಧಿ ನಂತರ ಸೀತಾರಾಮನ್ ಬಜೆಟ್ ಮಂಡಿಸಿದ ಎರಡನೇ ಮಹಿಳೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.