ADVERTISEMENT

ಅಪ್ಪ ಸತ್ತರೂ ಈ ಅಧಿಕಾರಿ 1 ನಿಮಿಷವೂ ಬಜೆಟ್ ಡ್ಯೂಟಿ ಬಿಡಲಿಲ್ಲ, ಮನೆಗೂ ಹೋಗಲಿಲ್ಲ

ವೈರಲ್ ಟ್ವೀಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜನವರಿ 2020, 4:34 IST
Last Updated 31 ಜನವರಿ 2020, 4:34 IST
   

ಕೇಂದ್ರ ಹಣಕಾಸು ಇಲಾಖೆಯಲ್ಲಿ ಬಜೆಟ್‌ ಪ್ರತಿಗಳನ್ನು ಸಿದ್ಧಪಡಿಸುವುದು ಅತ್ಯಂತ ಜವಾಬ್ದಾರಿಯ ಕೆಲಸ. ಅತಿಕಡಿಮೆ ಅವಧಿಯಲ್ಲಿ ನಿರ್ವಹಿಸಬೇಕಾದ ಕೆಲಸಗಳ ಒತ್ತಡ ವಿಪರೀತ ಇರುತ್ತದೆ. ಇಂಥ ಸಂದರ್ಭ ನೌಕರರು ಮನೆ, ಕುಟುಂಬ ಮರೆತು ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವುದು ವಾಡಿಕೆ.

ಈ ಬಾರಿ ಬಜೆಟ್ ಪ್ರತಿಗಳ ಮುದ್ರಣದ ಜವಾಬ್ದಾರಿ ಹೊತ್ತಿದ್ದ ಅಧಿಕಾರಿಯೊಬ್ಬರು ತಮ್ಮ ತಂದೆ ನಿಧನರಾದ ಸುದ್ದಿ ತಿಳಿದ ನಂತರವೂ ಕಾಯಕ ಮುಂದುವರಿಸಿದ ಅಪರೂಪದ ಪ್ರಕರಣವೊಂದು ವರದಿಯಾಗಿದೆ. ಸತ್ವಃಕೇಂದ್ರ ಹಣಕಾಸು ಇಲಾಖೆ ಈ ಸಂಗತಿಯನ್ನು ತನ್ನ ಅಧಿಕೃತ ಟ್ವಿಟರ್‌ ಅಕೌಂಟ್‌ನಲ್ಲಿ ಹಂಚಿಕೊಂಡಿದೆ.

ಬಜೆಟ್ ಪ್ರತಿಗಳ ಮುದ್ರಣದ ಜವಾಬ್ದಾರಿ ಹೊತ್ತಿದ್ದ ಮುದ್ರಣ ವಿಭಾಗದ ಉಪ ವ್ಯವಸ್ಥಾಪಕ ಕುಲ್‌ದೀಪ್ ಕುಮಾರ್ ಶರ್ಮಾ ಅವರ ತಂದೆ ಜನವರಿ 26ರಂದು ನಿಧನರಾದರು. ತುರ್ತಾಗಿ ಆಗಬೇಕಿದ್ದ ಬೆಟ್ಟದಷ್ಟು ಕೆಲಸ ಮತ್ತು ತಮ್ಮ ಮೇಲಿದ್ದ ಹೊಣೆಗಾರಿಕೆಯ ಕರೆಗೆ ಓಗೊಟ್ಟ ಶರ್ಮಾ ಮುದ್ರಣ ವಿಭಾಗದಿಂದ ಒಂದು ನಿಮಿಷವಾದರೂಕದಲಲು ಮನಸ್ಸು ಮಾಡಲಿಲ್ಲ.

ADVERTISEMENT

ಬಜೆಟ್ ಪ್ರತಿಗಳ ಮುದ್ರಣವನ್ನು ಕಾಲಮಿತಿಯಲ್ಲಿ ಮುಗಿಸಲು ಶರ್ಮಾ ಅವರ ಸೇವೆ ದೇಶಕ್ಕೆ ಅಗತ್ಯವಾಗಿತ್ತು. ಬಜೆಟ್ ಪ್ರಕ್ರಿಯೆಯಲ್ಲಿ 31 ವರ್ಷಗಳ ಅನುಭವವಿರುವ ಶರ್ಮಾ, ತಮ್ಮ ಬದುಕಿನ ಅತ್ಯಂತದುಃಖದ ಸನ್ನಿವೇಶದಲ್ಲಿಯೂ ಕರ್ತವ್ಯದೆಡೆಗೆ ಬದ್ಧರಾಗಿ ನಿಂತರು ಎಂದು ಹಣಕಾಸು ಇಲಾಖೆ ಟ್ವಿಟರ್‌ನಲ್ಲಿ ಹೇಳಿದೆ.

ಶರ್ಮಾ ಅವರ ಕುಟುಂಬಕ್ಕೆ ನೂರಾರು ಮಂದಿ ಸಂತಾಪ ತಿಳಿಸಿದ್ದಾರೆ. ‘ಇಂಥ ಬದ್ಧತೆ ಇರುವ ನೌಕರರಿಂದಲೇ ಸರ್ಕಾರ ನಡೆಯುತ್ತಿದೆ’ ಎಂದು ಹಲವರುಕಾಮೆಂಟ್ ಮಾಡಿದ್ದಾರೆ.

ಬಜೆಟ್ ಮಾಹಿತಿಗೆ:www.prajavani.net/budget-2020

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.