ADVERTISEMENT

ಅಕ್ಟೋಬರ್‌–ನವೆಂಬರ್‌ ಅವಧಿ: 30 ಕಂಪನಿಗಳ ಐಪಿಒ

ಪಿಟಿಐ
Published 26 ಸೆಪ್ಟೆಂಬರ್ 2021, 17:18 IST
Last Updated 26 ಸೆಪ್ಟೆಂಬರ್ 2021, 17:18 IST
 ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)
ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)   

ನವದೆಹಲಿ: ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮೂಲಕ ಕನಿಷ್ಠ 30 ಕಂಪನಿಗಳು ಅಕ್ಟೋಬರ್‌–ನವೆಂಬರ್‌ ಅವಧಿಯಲ್ಲಿ ಬಂಡವಾಳ ಸಂಗ್ರಹಿಸುವ ನಿರೀಕ್ಷೆ ಇದೆ ಎಂದು ಮರ್ಚೆಂಟ್‌ ಬ್ಯಾಂಕಿಂಗ್‌ ಮೂಲಗಳು ಹೇಳಿವೆ.

ಒಟ್ಟಾರೆ ₹ 45 ಸಾವಿರ ಕೋಟಿ ಬಂಡವಾಳ ಸಂಗ್ರಹ ಆಗುವ ಅಂದಾಜು ಮಾಡಲಾಗಿದ್ದು, ಇದರಲ್ಲಿ ಹೆಚ್ಚಿನ ಪಾಲನ್ನು ತಂತ್ರಜ್ಞಾನ ಆಧಾರಿತ ಕಂಪನಿಗಳು ಪಡೆದುಕೊಳ್ಳಲಿವೆ ಎಂದು ತಿಳಿಸಿವೆ.

ಪಾಲಿಸಿಬಜಾರ್‌, ಎಂಕ್ಯೂರ್ ಫಾರ್ಮಾಸುಟಿಕಲ್ಸ್‌, ನೈಕಾ, ಸಿಎಂಎಸ್‌ ಇನ್ಫೊ ಸಿಸ್ಟಮ್ಸ್‌, ಮೊಬಿಕ್ವಿಕ್‌ ಸಿಸ್ಟಮ್ಸ್‌ ಅಕ್ಟೋಬರ್‌–ನವೆಂಬರ್‌ ಅವಧಿಯಲ್ಲಿ ಬಂಡವಾಳ ಸಂಗ್ರಹಿಸುವ ನಿರೀಕ್ಷೆ ಇರುವ ಪ್ರಮುಖ ಕಂಪನಿಗಳಾಗಿವೆ ಎಂದು ಮರ್ಜೆಂಟ್ ಬ್ಯಾಂಕಿಂಗ್‌ ಮೂಲಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.