ADVERTISEMENT

₹1,854 ಕೋಟಿ ವೇತನ ಪಡೆದ ಸುಂದರ್‌ ಪಿಚೈ

ರಾಯಿಟರ್ಸ್‌
Published 22 ಏಪ್ರಿಲ್ 2023, 14:02 IST
Last Updated 22 ಏಪ್ರಿಲ್ 2023, 14:02 IST
ಸುಂದರ್‌ ಪಿಚೈ
ಸುಂದರ್‌ ಪಿಚೈ   

ಬೆಂಗಳೂರು (ರಾಯಿಟರ್ಸ್‌): ಆಲ್ಫಾಬೆಟ್‌ ಇಂಕ್‌ ಸಿಇಒ ಸುಂದರ್ ಪಿಚೈ ಅವರು 2022ರಲ್ಲಿ ಒಟ್ಟು ₹1,854 ಕೋಟಿ ವೇತನ ಪಡೆದಿದ್ದಾರೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ. ಕಂಪನಿಯಲ್ಲಿನ ಮಧ್ಯಮ ದರ್ಜೆಯ ಉದ್ಯೋಗಿಯೊಬ್ಬರು ಪಡೆಯುವ ವೇತನಕ್ಕಿಂತ 800 ಪಟ್ಟು ಹೆಚ್ಚಿನ ಮೊತ್ತ ಇದಾಗಿದೆ.

ಒಟ್ಟು ಮೊತ್ತದಲ್ಲಿ ಷೇರು ರೂಪದಲ್ಲಿ ದೊರೆತಿರುವ ಮೊತ್ತವೇ ₹1,788 ಕೋಟಿಯಷ್ಟು ಇದೆ. ಕಂಪನಿಯು ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಮಾಡುತ್ತಿರುವ ಸಂದರ್ಭದಲ್ಲಿಯೇ ಪಿಚೈ ಮತ್ತು ಇತರ ಉದ್ಯೋಗಿಗಳಿಗೆ ನೀಡಲಾಗಿರುವ ವೇತನದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಜಾಗತಿಕ ಮಟ್ಟದಲ್ಲಿ 12 ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ಕಂಪನಿಯು ಜನವರಿಯಲ್ಲಿ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT