ADVERTISEMENT

ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌ ಆರಂಭ

​ಪ್ರಜಾವಾಣಿ ವಾರ್ತೆ
Published 4 ಮೇ 2023, 10:23 IST
Last Updated 4 ಮೇ 2023, 10:23 IST
   

ಬೆಂಗಳೂರು: ಬೇಸಿಗೆ ರಜೆಯ ಪ್ರಯುಕ್ತ ಅಮೆಜಾನ್‌ ತನ್ನ ಆನ್‌ಲೈನ್‌ ಶಾಪಿಂಗ್‌ ಗ್ರಾಹಕರಿಗಾಗಿ ನಾಲ್ಕು ದಿನಗಳ “ಗ್ರೇಟ್ ಸಮ್ಮರ್‌ ಸೇಲ್‌” ಘೋಷಣೆ ಮಾಡಿದ್ದು, ಮೇ 4ರಿಂದ ಆರಂಭವಾಗಿದೆ. ಈ ಸೇಲ್‌ನಲ್ಲಿ ಸಾಕಷ್ಟು ಪ್ರಾಡಕ್ಟ್‌ ಹಾಗೂ ಬ್ರಾಂಡ್‌ಗಳ ಮೇಲೆ ರಿಯಾಯಿತಿ ನೀಡಲಾಗುತ್ತಿದ್ದು, ಮೇ 8ರವರೆಗೆ ಇರಲಿದೆ.

ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತು ಅಲಂಕಾರ ಸಾಧನಗಳು, ದಿನಸಿ ವಸ್ತು, ಮನೆ, ಅಡುಗೆಮನೆ ಮತ್ತು ದೈನಂದಿನ ಅಗತ್ಯತೆಗಳು ಸೇರಿದಂತೆ ಇತರೆ ವಿಭಾಗಗಳಲ್ಲಿ ಕೊಡುಗೆಗಳು ಲಭ್ಯ ಇವೆ. ಇದಷ್ಟೇ ಅಲ್ಲದೆ, ಪ್ರೈಮ್‌ ಸದಸ್ಯತ್ವ ಹೊಂದಿರುವ ಗಾಹಕರು ಪ್ರೈಮ್ ಅರ್ಲಿ ಅಕ್ಸೆಸ್‌ ಬಳಸಿಕೊಂಡು ಮೇ 4 ಮಧ್ಯರಾತ್ರಿಯಿಂದಲೇ ಶಾಪಿಂಗ್ ಮಾಡಬಹುದು.

ಕೊಡುಗೆಗಳ ವಿವರ: ಸ್ಮಾರ್ಟ್‌ ಟಿವಿ ಮತ್ತು ಅಪ್ಲೈಯನ್ಸ್‌ಗಳ ಮೇಲೆ ಶೇ. 60ರವರೆಗೆ, ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ. 40ರವರೆಗೆ, ಮನೆ, ಅಡುಗೆಮನೆ ಮತ್ತು ಹೊರಾಂಗಣ ಸಾಮಗ್ರಿಗಳ ಮೇಲೆ ಶೇ. 70ರವರೆಗೆ, ದಿನಸಿಗಳ ಮೇಲೆ ಶೇ. 50ರವರೆಗೆ ಹಾಗೂ ಎಕೋ ಸ್ಮಾರ್ಟ್ ಸ್ಪೀಕರ್ಸ್‌, ಫೈರ್ ಟಿವಿ ಸ್ಟಿಕ್‌ ಹಾಗೂ ಇತರೆ ಎಲೆಕ್ಟ್ರಿಕ್‌ ವಸ್ತುಗಳ ಮೇಲೆ ಶೇ. 40ರವರೆಗೆ ರಿಯಾಯಿತಿ ದೊರೆಯಬಹುದಾಗಿದೆ.

ADVERTISEMENT

ಇನ್ನು, ಐಸಿಐಸಿಐ ಬ್ಯಾಂಕ್‌ ಮತ್ತು ಕೊಟಾಕ್‌ ಬ್ಯಾಂಕ್ ಕ್ರೆಡಿಟ್‌/ಡೆಬಿಟ್ ಕಾರ್ಡ್‌ ಹೊಂದಿರುವವರು ಶೇ.10ರಷ್ಟು ಇನ್‌ಸ್ಟಂಟ್ ಬ್ಯಾಂಕ್ ರಿಯಾಯಿತಿ; ಬಜಾಜ್‌ ಫಿನ್‌ಸರ್ವ್‌ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳ ಮೇಲೆ ನೋ ಕಾಸ್ಟ್ ಇಎಂಐ, ವಿನಿಮಯ ಕೊಡುಗೆ, ಇತರ ಪ್ರಮುಖ ಕ್ರೆಡಿಟ್‌/ಡೆಬಿಟ್ ಕಾರ್ಡ್‌ಗಳ ಮೇಲೂ ಆಕರ್ಷಕ ಕೊಡುಗೆಗಳನ್ನು ಘೋಷಿಸಲಾಗಿದೆ.

ಅಮೆಜಾನ್‌ ಪೇ ಮೂಲಕ ಹಣ ಪಾವತಿ, ಬಿಲ್‌ ಪಾವತಿ ಮಾಡುವುದರಿಂದ ಹಬ್ಬಗಳ ಸಮಯದಲ್ಲಿ ₹ 500 ವರೆಗೆ ಬಹುಮಾನ ಗೆಲ್ಲಬಹುದು. 'ಅಮೆಜಾನ್ ಪೇ ಲೇಟರ್‌ನಲ್ಲಿ ₹ 60,000ವರೆಗೆ ಇನ್‌ಸ್ಟಂಟ್ ಕ್ರೆಡಿಟ್ ಹಾಗೂ ₹600. ಸ್ವಾಗತ ರಿವಾರ್ಡ್‌ಗಳನ್ನು ಸಹ ಪಡೆಯಬಹುದಾಗಿದೆ. ಯಾವುದೇ ಶಾಪಿಂಗ್ ಮೇಲೆ ಶೇ. 5ರಷ್ಟು ಕ್ಯಾಶ್‌ಬ್ಯಾಕ್‌ ಪಡೆಯಬಹುದಾಗಿದ್ದು, ಇದರ ಜೊತೆಗೆ ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಬಳಸಿ ₹ 2,000 ವರೆಗೆ ಸ್ವಾಗತ ರಿವಾರ್ಡ್‌ಗಳನ್ನು ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.