ನವದೆಹಲಿ: ಏರ್ಟೆಲ್ ಕಂಪನಿಯುಭಾನುವಾರದಿಂದಲೇ ಜಾರಿಗೆ ಬರುವಂತೆ ಪ್ರೀಪೇಯ್ಡ್ನ ಕನಿಷ್ಠ ರೀಚಾರ್ಜ್ ದರವನ್ನು ₹ 23 ರಿಂದ ₹ 45ಕ್ಕೆ ಏರಿಕೆ ಮಾಡಿದೆ.
ಕಂಪನಿಯ ಸೇವೆಗಳನ್ನು ಪಡೆದುಕೊಳ್ಳಲು ಪ್ರತಿ 28 ದಿನಗಳಿಗೊಮ್ಮೆ ₹ 45 ರೀಚಾರ್ಜ್ ಮಾಡಿಸುವುದು ಕಡ್ಡಾಯವಾಗಿದೆ.ಅವಧಿಯೊಳಗೆರಿಚಾರ್ಜ್ ಮಾಡಲು ವಿಫಲವಾದರೆ, 15 ದಿನಗಳ ಹೆಚ್ಚುವರಿ ಅವಧಿಯಲ್ಲಿ ಕೆಲವೇ ಪ್ರಯೋಜನಗಳು ಮಾತ್ರವೇ ಸಿಗಲಿವೆ. ಅದನ್ನೂ ಕಂಪನಿಯೇ ನಿರ್ಧರಿಸಲಿದೆ. ಆ ಅವಧಿಯಲ್ಲಿಯೂ ರಿಚಾರ್ಜ್ ಮಾಡದೇ ಇದ್ದರೆ ಎಲ್ಲಾ ಸೇವೆಗಳನ್ನು ಅಮಾನತುಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.