ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿ ಸುಂಕ ನೀತಿಯಿಂದ 2025–26ರ ಆರ್ಥಿಕ ವರ್ಷದಲ್ಲಿ ದೇಶದ ವಾಹನಗಳ ಬಿಡಿಭಾಗಗಳ ತಯಾರಕರು ₹4,500 ಕೋಟಿಯಷ್ಟು ನಷ್ಟ ಕಾಣುವ ನಿರೀಕ್ಷೆಯಿದೆ ಎಂದು ಕ್ರೆಡಿಟ್ ರೇಟಿಂಗ್ಸ್ ಸಂಸ್ಥೆ ಐಸಿಆರ್‌ಎ ಸೋಮವಾರ ಹೇಳಿದೆ.
2023–24ರ ಆರ್ಥಿಕ ವರ್ಷದಲ್ಲಿ ₹3 ಲಕ್ಷ ಕೋಟಿಗೂ ಹೆಚ್ಚು ವರಮಾನ ಗಳಿಸಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 6ರಿಂದ ಶೇ 8ರಷ್ಟು ವರಮಾನ ಕಡಿಮೆಯಾಗಬಹುದು ಎಂದು ಹೇಳಿದೆ.
ವಾಹನದ ಪ್ರಮುಖ ಬಿಡಿಭಾಗಗಳ ಆಮದು ಮೇಲೆ ಅಮೆರಿಕ ಶೇ 25ರಷ್ಟು ಸುಂಕ ವಿಧಿಸಿದೆ. ಇದು ರಫ್ತು ಮೇಲೆ ಪರಿಣಾಮ ಬೀರಲಿದ್ದು, ವರಮಾನದ ಇಳಿಕೆಗೆ ಕಾರಣವಾಗಲಿದೆ ಎಂದು ಹೇಳಿದೆ.
ಭಾರತದಿಂದ ಎಂಜಿನ್ ಬಿಡಿಭಾಗಗಳು, ಪವರ್ ಟ್ರೈನ್ಸ್ ಮತ್ತು ಟ್ರಾನ್ಸ್‌ಮಿಷನ್‌ಗಳು ಅತಿಹೆಚ್ಚು ಪ್ರಮಾಣದಲ್ಲಿ ಅಮೆರಿಕಕ್ಕೆ ರವಾನೆ ಆಗುತ್ತವೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.