ADVERTISEMENT

ಮೇನಲ್ಲಿ ವಾಹನ ಮಾರಾಟ ಕುಸಿತ

ಪಿಟಿಐ
Published 1 ಜೂನ್ 2020, 16:11 IST
Last Updated 1 ಜೂನ್ 2020, 16:11 IST

ನವದೆಹಲಿ : ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಮೇ ತಿಂಗಳ ಮಾರಾಟದಲ್ಲಿ ಭಾರಿ ಕುಸಿತ ಕಂಡುಬಂದಿದೆ.

ಲಾಕ್‌ಡೌನ್‌ ಕಾರಣಕ್ಕೆ ಕಂಪನಿಗಳು ತಯಾರಿಕಾ ಚಟುವಟಿಕೆಗಳನ್ನು ನಿಲ್ಲಿಸಿದ್ದವು. ಜತೆಗೆ ಬೇಡಿಕೆಯೂ ಇಲ್ಲದಿರುವುದರಿಂದ ಮಾರಾಟದ ಮೇಲೆ ಭಾರಿ ಪೆಟ್ಟು ಬಿದ್ದಿದೆ.

ಮಾರುತಿ ಸುಜುಕಿ ಇಂಡಿಯಾದ ಮಾರಾಟ ಶೇ 86ರಷ್ಟು ಕುಸಿತ ಕಂಡಿದ್ದು, ಒಟ್ಟಾರೆ 18,539 ವಾಹನಗಳು ಮಾರಾಟವಾಗಿವೆ. 2019ರ ಮೇನಲ್ಲಿ 1.34 ಲಕ್ಷ ವಾಹನಗಳು ಮಾರಾಟವಾಗಿದ್ದವು.

ADVERTISEMENT

ದೇಶಿ ಮಾರಾಟ ಶೇ 89ರಷ್ಟು ಹಾಗೂ ರಫ್ತು ಶೇ 49ರಷ್ಟು ಕಡಿಮೆಯಾಗಿದೆ.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ಒಟ್ಟಾರೆ ಮಾರಾಟ ಶೇ 79ರಷ್ಟು ಕುಸಿತ ಕಂಡಿದ್ದು 9,560 ವಾಹನಗಳನ್ನು ಮಾರಾಟ ಮಾಡಿದೆ.ದೇಶಿ ಮಾರಾಟ ಶೇ 79ರಷ್ಟು ಕುಸಿದಿದೆ.

ಟೊಯೋಟ ಕಂಪನಿಯು ಮಾರಾಟವೂ ಶೇ 86ರಷ್ಟು ಕುಸಿತ ಕಂಡಿದೆ.

ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಹೀರೊ ಮೋಟೊ ಕಾರ್ಪ್ ಕಂಪನಿಯ ಮಾರಾಟ ಶೇ 83ರಷ್ಟು ಇಳಿಕೆಯಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.