ADVERTISEMENT

ಜುಲೈನಲ್ಲಿ ವಾಹನ ಮಾರಾಟ ಹೆಚ್ಚಳ

ಪಿಟಿಐ
Published 1 ಆಗಸ್ಟ್ 2021, 15:17 IST
Last Updated 1 ಆಗಸ್ಟ್ 2021, 15:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಮುಖ ಕಂಪನಿಗಳ ಪ್ರಯಾಣಿಕ ವಾಹನಗಳ ಮಾರಾಟವು ಜುಲೈನಲ್ಲಿ ಏರಿಕೆ ಕಂಡಿದೆ. ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಜುಲೈ ತಿಂಗಳ ಮಾರಾಟವು ಶೇಕಡ 50ರಷ್ಟು ಹೆಚ್ಚಾಗಿದ್ದು 1.61 ಲಕ್ಷಕ್ಕೆ ತಲುಪಿದೆ. ಹಿಂದಿನ ವರ್ಷದ ಜುಲೈನಲ್ಲಿ 1.08 ಲಕ್ಷ ವಾಹನಗಳನ್ನು ಮಾರಾಟ ಮಾಡಿತ್ತು. ದೇಶಿ ಮಾರಾಟವು ಶೇ 39ರಷ್ಟು ಏರಿಕೆ ಆಗಿದೆ ಎಂದು ಕಂಪನಿಯು ತಿಳಿಸಿದೆ.

ಟಾಟಾ ಮೋಟರ್ಸ್‌ ಕಂಪನಿಯ ದೇಶಿ ಮಾರಾಟವು ಶೇ 92ರಷ್ಟು ಹೆಚ್ಚಾಗಿದ್ದು 51,981ಕ್ಕೆ ತಲುಪಿದೆ. ಪ್ರಯಾಣಿಕ ವಾಹನ ಮಾರಾಟವು 15,012ರಿಂದ 30,185ಕ್ಕೆ ಏರಿಕೆ ಆಗಿದೆ. ವಾಣಿಜ್ಯ ವಾಹನಗಳ ಮಾರಾಟವು ಹಿಂದಿನ ವರ್ಷದ ಜುಲೈಗೆ ಹೋಲಿಸಿದರೆ ಈ ಬಾರಿಯ ಜುಲೈನಲ್ಲಿ ಶೇ 81ರಷ್ಟು ಹೆಚ್ಚಾಗಿದೆ.

ಹುಂಡೈ ಮೋಟರ್ ಇಂಡಿಯಾ ಕಂಪನಿಯ ಒಟ್ಟಾರೆ ಮಾರಾಟ ಶೇ 46ರಷ್ಟು ಹೆಚ್ಚಾಗಿದ್ದು 60,249 ವಾಹನಗಳನ್ನು ಮಾರಾಟ ಮಾಡಿದೆ. ದೇಶಿ ಮಾರಾಟವು ಶೇ 26ರಷ್ಟು ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯ ದೇಶಿ ಮಾರಾಟ ಶೇ 12ರಷ್ಟು ಹೆಚ್ಚಾಗಿದೆ. ನಿಸಾನ್‌ ಇಂಡಿಯಾ ಕಂಪನಿಯ ಮಾರಾಟವು 784ರಿಂದ 4,259ಕ್ಕೆ ಏರಿಕೆ ಆಗಿದೆ. ಎಂಜಿ ಮೋಟರ್‌ ಇಂಡಿಯಾ ಕಂಪನಿಯು 4,225 ವಾಹನಗಳನ್ನು ಮಾರಾಟ ಮಾಡಿದೆ. ಹಿಂದಿನ ವರ್ಷದ ಜುಲೈಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.

ಸ್ಕೋಡಾ ಆಟೊ ಇಂಡಿಯಾ ಕಂಪನಿಯ ಮಾರಾಟವು ಮೂರುಪಟ್ಟು ಹೆಚ್ಚಾಗಿದ್ದು 3,080ಕ್ಕೆ ತಲುಪಿದೆ. ಹಿಂದಿನ ವರ್ಷದ ಜುಲೈನಲ್ಲಿ 922 ವಾಹನಗಳನ್ನು ಮಾರಾಟ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.