ADVERTISEMENT

ಆಕಾಸಾ ಏರ್‌ ಸೇವೆ ಆರಂಭ

ಪಿಟಿಐ
Published 7 ಆಗಸ್ಟ್ 2022, 15:35 IST
Last Updated 7 ಆಗಸ್ಟ್ 2022, 15:35 IST
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟಕ್ಕೆ ಸಜ್ಜಾದ ಆಕಾಸಾ ಏರ್‌ ವಿಮಾನ –ಪಿಟಿಐ ಚಿತ್ರ
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟಕ್ಕೆ ಸಜ್ಜಾದ ಆಕಾಸಾ ಏರ್‌ ವಿಮಾನ –ಪಿಟಿಐ ಚಿತ್ರ   

ನವದೆಹಲಿ: ಆಕಾಸಾ ಏರ್ ವಿಮಾನಯಾನ ಕಂಪನಿಯ ಮೊದಲ ಸೇವೆಯು ಮುಂಬೈ–ಅಹಮದಾಬಾದ್‌ ನಡುವೆ ಭಾನುವಾರ ಆರಂಭವಾಗಿದೆ.

ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಿಮಾನ ಸೇವೆಗೆ ವರ್ಚುವಲ್‌ ಆಗಿ ಚಾಲನೆ ನೀಡಿದರು.

ಕಂಪನಿಯು ಆಗಸ್ಟ್‌ 13ರಿಂದ ಬೆಂಗಳೂರು–ಕೊಚ್ಚಿ, ಆಗಸ್ಟ್‌ 19ರಿಂದ ಬೆಂಗಳೂರು–ಮುಂಬೈ ಹಾಗೂಸೆಪ್ಟೆಂಬರ್ 15ರಿಂದ ಚೆನ್ನೈ–ಮುಂಬೈ ಮಾರ್ಗದಲ್ಲಿ ಸೇವೆ ಆರಂಭಿಸಲು ನಿರ್ಧರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.