ADVERTISEMENT

ಆಕಾಶ್‌ ಏರ್‌: ಕಾರ್ಯಾಚರಣೆಗೆ ನಿರಾಕ್ಷೇಪಣಾ ಪ್ರಮಾಣಪತ್ರ

ಪಿಟಿಐ
Published 12 ಅಕ್ಟೋಬರ್ 2021, 1:25 IST
Last Updated 12 ಅಕ್ಟೋಬರ್ 2021, 1:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದ ಕೋಟ್ಯಧಿಪತಿ ರಾಕೇಶ್ ಜುಂಝನ್‌ವಾಲಾ ಅವರು ಆರಂಭಿಸಲಿರುವ ವಿಮಾನಯಾನ ಕಂಪನಿ ‘ಆಕಾಶ್‌ ಏರ್‌’ ಕಾರ್ಯಾಚರಣೆಗೆ ನಾಗರಿಕ ವಿಮಾನಯಾನ ಸಚಿವಾಲಯವು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡಿದೆ ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಚಿವಾಲಯದ ಬೆಂಬಲ ಮತ್ತು ಎನ್‌ಒಸಿ ನೀಡಿರುವುದಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಆಕಾಶ್‌ ಏರ್‌ನ ಸಿಇಒ ವಿನಯ್‌ ದುಬೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದುಬೆ ಅವರು ಜೆಟ್‌ ಏರ್‌ವೇಸ್‌ನ ಮಾಜಿ ಸಿಇಒ ಆಗಿದ್ದಾರೆ.

ಹೊಸ ವಿಮಾನ ಸಂಸ್ಥೆಯು 2022ರ ಬೇಸಿಗೆಯ ವೇಳೆಗೆ ಕಾರ್ಯಾರಂಭ ಮಾಡುವ ಗುರಿಯನ್ನು ಹೊಂದಿದೆ ಎಂದು ಎನ್‌ಎಸ್‌ವಿ ಏವಿಯೇಷನ್‌ ಪ್ರವೇಟ್‌ ಲಿಮಿಟೆಡ್‌ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.