ADVERTISEMENT

ಬಜಾಜ್ ಮಾರುಕಟ್ಟೆ ಮೌಲ್ಯ ₹ 1 ಲಕ್ಷ ಕೋಟಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 16:37 IST
Last Updated 8 ಜನವರಿ 2021, 16:37 IST
   

ಬೆಂಗಳೂರು: ಬಜಾಜ್ ಆಟೊ ಲಿಮಿಟೆಡ್ ಕಂಪನಿಯು ₹ 1 ಲಕ್ಷ ಕೋಟಿಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ, ದ್ವಿಚಕ್ರ ವಾಹನ ತಯಾರಿಕಾ ಕ್ಷೇತ್ರದವಿಶ್ವದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜನವರಿ 1ರಂದು ಬಜಾಜ್‌ ಆಟೊ ಲಿಮಿಟೆಡ್‌ನ ಷೇರಿನ ಬೆಲೆಯು ₹ 3,479ಕ್ಕೆ ತಲುಪಿತು. ಆಗ ಕಂಪನಿಯ ಮಾರುಕಟ್ಟೆ ಬಂಡವಾಳವು ₹ 1 ಲಕ್ಷ ಕೋಟಿಯನ್ನು ದಾಟಿತು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

‘ಇಷ್ಟು ದೊಡ್ಡ ಪ್ರಮಾಣದ ಮಾರುಕಟ್ಟೆ ಬಂಡವಾಳವನ್ನು ವಿಶ್ವದ ಯಾವುದೇ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೊಂದಿಲ್ಲ ಎಂಬುದು ತಜ್ಞರ ಮಾತು’ ಎಂದು ಕಂಪನಿ ಹೇಳಿದೆ. ‘ಇದು ನಮ್ಮ ಗ್ರಾಹಕರಿಗೆ ಅತ್ಯುತ್ತಮ ರೀತಿಯಲ್ಲಿ ಸೇವೆ ಒದಗಿಸಲು, ಅವರ ಖುಷಿಯನ್ನು ಹೆಚ್ಚಿಸಲು ನಮಗೆ ಇನ್ನಷ್ಟು ಪ್ರೇರಣೆ ನೀಡುತ್ತದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.