ADVERTISEMENT

ಬ್ಯಾಂಕ್‌ ಆಫ್‌ ಬರೋಡಾ ಲಾಭ ಶೇ 79ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 13:01 IST
Last Updated 30 ಜುಲೈ 2022, 13:01 IST
   

ನವದೆಹಲಿ: ಬ್ಯಾಂಕ್‌ ಆಫ್‌ ಬರೋಡಾ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ಶೇ 79ರಷ್ಟು ಹೆಚ್ಚಾಗಿದ್ದು ₹ 2,168 ಕೋಟಿಗೆ ಏರಿಕೆ ಆಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ ₹ 1,208 ಕೋಟಿ ನಿವ್ವಳ ಲಾಭ ಗಳಿಸಿತ್ತು. ಸುಸ್ತಿ ಸಾಲದಲ್ಲಿ ಇಳಿಕೆ ಆಗಿರುವುದೇ ಲಾಭ ಹೆಚ್ಚಾಗಲು ಕಾರಣ ಎಂದು ಬ್ಯಾಂಕ್‌ ತಿಳಿಸಿದೆ.

ಬ್ಯಾಂಕ್‌ನ ಒಟ್ಟಾರೆ ವರಮಾನ ₹ 19,916 ಕೋಟಿಯಿಂದ ₹ 20,119 ಕೋಟಿಗೆ ಏರಿಕೆ ಆಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಬಡ್ಡಿ ವರಮಾನ ₹ 17,052 ಕೋಟಿಯಿಂದ ₹ 18,937 ಕೋಟಿಗೆ ಏರಿಕೆ ಆಗಿದೆ. ಕಾರ್ಯಾಚರಣೆ ಲಾಭವು ₹ 5,707 ಕೋಟಿಯಿಂದ ₹ 4,528 ಕೋಟಿಗೆ (ಶೇ 19) ಇಳಿಕೆ ಕಂಡಿದೆ.

ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು ಶೇ 8.86 ರಿಂದ ಶೇ 6.26ಕ್ಕೆ ಇಳಿಕೆ ಕಂಡಿದೆ. ನಿವ್ವಳ ಎನ್‌ಪಿಎ ಸಹ ಶೇ 3.03 ರಿಂದ ಶೇ 1.58ಕ್ಕೆ ಇಳಿಕೆಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.